For the best experience, open
https://m.newskannada.com
on your mobile browser.
Advertisement

ಶಾಲೆಯ ಹತ್ತಾರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ : ವಿಕೃತ ಕಾಮಿ ಅರೆಸ್ಟ್‌

: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಸ್ಪೋರ್ಟ್ಸ್​ ಹೇಳಿಕೊಡುವ ನೆಪದಲ್ಲಿ ಹಳೆ ವಿದ್ಯಾರ್ಥಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಜಿಲ್ಲೆಯ ಪ್ರೌಢ ಶಾಲೆಯೊಂದರಲ್ಲಿ ನಡೆದಿದೆ.
12:10 PM Jul 09, 2024 IST | Nisarga K
ಶಾಲೆಯ ಹತ್ತಾರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ   ವಿಕೃತ ಕಾಮಿ ಅರೆಸ್ಟ್‌
ಶಾಲೆಯ ಹತ್ತಾರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ : ವಿಕೃತ ಕಾಮಿ ಅರೆಸ್ಟ್‌

ಮಂಡ್ಯ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಸ್ಪೋರ್ಟ್ಸ್​ ಹೇಳಿಕೊಡುವ ನೆಪದಲ್ಲಿ ಹಳೆ ವಿದ್ಯಾರ್ಥಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಜಿಲ್ಲೆಯ ಪ್ರೌಢ ಶಾಲೆಯೊಂದರಲ್ಲಿ ನಡೆದಿದೆ.ಹಳೆಯ ವಿದ್ಯಾರ್ಥಿ ಯೋಗಿ ಎನ್ನುವನನ್ನು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಈ ಕಿರಾತಕ ಮಕ್ಕಳಿಗೆ ಸ್ಪೋರ್ಟ್ಸ್​, ಡ್ರಾಯಿಂಗ್ ಹೇಳಿ ಕೊಡುವ ನೆಪದಲ್ಲಿ ಈ ಹೀನ ಕೃತ್ಯ ಎಸಗಿದ್ದಾನೆ. ಅಣ್ಣನಂತೆ ಮೊದಲು ನಂಬಿಸಿ ವಿದ್ಯಾರ್ಥಿನಿಯರ ನಗ್ನ ಪೋಟೋಗಳನ್ನು ತೆಗೆದು ಬಳಿಕ ನಿಮ್ಮ ತಂದೆ, ತಾಯಿಗೆ ಫೋಟೋ ತೋರಿಸುವುದಾಗಿ ಹೇಳಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದನು. ಹೀಗೆ ಆ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.ಕ್ರೀಡೆಯಲ್ಲಿ ಆಸಕ್ತಿ ಇದ್ದ ಬಾಲಕೀಯರನ್ನೇ ಇವನು ಟಾರ್ಗೆಟ್ ಮಾಡುತ್ತಿದ್ದನು.

ಇವನ ಕೃತ್ಯದಿಂದ ಬೇಸತ್ತಿದ್ದ ನಾಲ್ವರು ಬಾಲಕಿಯರು ಸೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ದರು. ಪತ್ರ ನೋಡಿ ಶಾಲೆಗೆ ಹೋಗಿ ವಿಚಾರಿಸಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್​​​ಐಆರ್​ ದಾಖಲಿಸಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆ ಜೊತೆಗೆ ಐಪಿಸಿ ಸೆಕ್ಸನ್ 354A, 354D, 509 ಅಡಿ ಕೇಸ್ ದಾಖಲಾಗಿದೆ.

Advertisement

Advertisement
Tags :
Advertisement