For the best experience, open
https://m.newskannada.com
on your mobile browser.
Advertisement

ಡ್ರಗ್ಸ್‌ ಕೊಟ್ಟು ಸಂಸದೆಗೆ ಲೈಂಗಿಕ ಕಿರುಕುಳ ಆರೋಪ : ಆಸ್ಟ್ರೇಲಿಯಾ ಎಂಪಿ

ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ ಸಂಸದೆ ಬ್ರಿಟಾನಿ ಲೌಗಾ ಅವರಿಗೆ ಕೆಲವು ಅಪರಿಚಿತರು ಮಾದಕ ದ್ರವ್ಯ ನೀಡಿ, ಲೈಂಗಿಕ ಕಿರುಕಳ ನೀಡಿರುವ ವಿಚಾರ ಬಹಿರಂಗಗೊಂಡಿದೆ. ಈ ಕುರಿತು ಖುದ್ದು ಲೌಗಾ ಅವರೇ ಮಾಹಿತಿ ನೀಡಿದ್ದಾರೆ.
11:31 AM May 06, 2024 IST | Nisarga K
ಡ್ರಗ್ಸ್‌ ಕೊಟ್ಟು ಸಂಸದೆಗೆ ಲೈಂಗಿಕ ಕಿರುಕುಳ ಆರೋಪ   ಆಸ್ಟ್ರೇಲಿಯಾ ಎಂಪಿ
ಡ್ರಗ್ಸ್‌ ಕೊಟ್ಟು ಸಂಸದೆಗೆ ಲೈಂಗಿಕ ಕಿರುಕುಳ ಆರೋಪ : ಆಸ್ಟ್ರೇಲಿಯಾ ಎಂಪಿ

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ ಸಂಸದೆ ಬ್ರಿಟಾನಿ ಲೌಗಾ ಅವರಿಗೆ ಕೆಲವು ಅಪರಿಚಿತರು ಮಾದಕ ದ್ರವ್ಯ ನೀಡಿ, ಲೈಂಗಿಕ ಕಿರುಕಳ ನೀಡಿರುವ ವಿಚಾರ ಬಹಿರಂಗಗೊಂಡಿದೆ. ಈ ಕುರಿತು ಖುದ್ದು ಲೌಗಾ ಅವರೇ ಮಾಹಿತಿ ನೀಡಿದ್ದಾರೆ.

Advertisement

ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಲೌಗಾ ಪೋಸ್ಟ್‌ ಹಾಕಿದ್ದಾರೆ. ಅದರಲ್ಲಿ "ಯೆಪೂನ್‌ ನಗರದಲ್ಲಿ ನೈಟ್‌ಔಟ್‌ಗೆ ತೆರಳಿದ್ದಾಗ ಯಾರೋ ನನಗೆ ಮಾದಕ ದ್ರವ್ಯ ನೀಡಿ, ಲೈಂಗಿಕ ಹಿಂಸಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಾದಕದ್ರವ್ಯದ ಮತ್ತಿನಿಂದ ಹೊರಬರುತ್ತಿದ್ದಂತೆ ಎ.28ರಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ ಎಂದಿದ್ದಾರೆ.

ಬಳಿಕ ಆಸ್ಪತ್ರೆಗೆ ತೆರಳಿ ವೈದ್ಯರು ಪರೀಕ್ಷಿಸಿದಾಗ ನಾನು ಸೇವಿಸದೇ ಇದ್ದರೂ, ನನ್ನ ದೇಹದಲ್ಲಿ ಡ್ರಗ್‌ ಅಂಶ ಪತ್ತೆಯಾಗಿದೆ. ಸಮಾಜದೊಂದಿಗೆ ಬೆರೆಯುವ ಉದ್ದೇಶದಿಂದ ತೆರಳಿದವರ ಮೇಲೆ ಇಂಥ ಕೃತ್ಯ ಎಸಗುವುದು ಅಕ್ಷಮ್ಯ ಎಂದಿದ್ದಾರೆ. ಲೌಗಾ ದೂರಿನ ಬಳಿಕ ಹಲವು ಮಹಿಳೆಯರು ಕೂಡ ಇಂಥಹದ್ದೇ ಆರೋಪ ಮಾಡಿದ್ದಾರೆ.

Advertisement

Advertisement
Tags :
Advertisement