For the best experience, open
https://m.newskannada.com
on your mobile browser.
Advertisement

10 ದಿನದಲ್ಲಿ 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಶೈತಾನ್​’

ಮಾರ್ಚ್​ 8ರಂದು ಬಿಡುಗಡೆ ಆದ ‘ಶೈತಾನ್​’ ಸಿನಿಮಾ ಗೆದ್ದು ಬೀಗಿದೆ. ಹಾರರ್​ ಕಥೆ ಇರುವ ಈ ಸಿನಿಮಾ 10 ದಿನಗಳ ಕಾಲ ಯಶ್ವಿಯಾಗಿ ಪ್ರದರ್ಶನ ಕಂಡು ಒಟ್ಟು 106 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.
07:03 PM Mar 18, 2024 IST | Ashika S
10 ದಿನದಲ್ಲಿ 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಶೈತಾನ್​’

ಮುಂಬೈ: ಮಾರ್ಚ್​ 8ರಂದು ಬಿಡುಗಡೆ ಆದ ‘ಶೈತಾನ್​’ ಸಿನಿಮಾ ಗೆದ್ದು ಬೀಗಿದೆ. ಹಾರರ್​ ಕಥೆ ಇರುವ ಈ ಸಿನಿಮಾ 10 ದಿನಗಳ ಕಾಲ ಯಶ್ವಿಯಾಗಿ ಪ್ರದರ್ಶನ ಕಂಡು ಒಟ್ಟು 106 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

Advertisement

ಅಜಯ್​ ದೇವಗನ್, ಜ್ಯೋತಿಕಾ ಅಭಿನಯಿಸಿರುವ  ಈ ಚಿತ್ರದಲ್ಲಿ ಆರ್​. ಮಾಧವನ್ ವಶೀಕರಣ ಮಾಡುವ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ.  ವಿಕಾಸ್​ ಬಹ್ಲ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಮೊದಲ ದಿನ ‘ಶೈತಾನ್​’ ಸಿನಿಮಾ 15.21 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. 2ನೇ ದಿನ 19.18 ಕೋಟಿ ರೂಪಾಯಿ ಹರಿದು ಬಂತು. ಮೂರನೇ ದಿನ 20.74 ಕೋಟಿ ರೂಪಾಯಿ ಬಾಚಿಕೊಂಡಿತು. 4ನೇ ದಿನ 7.81 ಕೋಟಿ ರೂಪಾಯಿ ಗಳಿಸಿತು. ಐದನೇ ದಿನ 6.57 ಕೋಟಿ ರೂ. ಕಲೆಕ್ಷನ್​ ಆಯಿತು. 6ನೇ ದಿನ 6.27 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. 7ನೇ ದಿನ 5.82 ಕೋಟಿ ಆದಾಯ ಬಂತು. 8ನೇ ದಿನ 5.12 ಕೋಟಿ ರೂಪಾಯಿ ಗಳಿಸಿತು. 9ನೇ ದಿನ 9.12 ಕೋಟಿ ರೂ. ಹಾಗೂ 10ನೇ ದಿನ 10.17 ಕೋಟಿ ರೂಪಾಯಿ ಗಳಿಸುವ ಮೂಲಕ ‘ಶೈತಾನ್​’ ಸೂಪರ್​ ಹಿಟ್​ ಆಗಿದೆ.

Advertisement

ಇದು ಗುಜರಾತಿ ಭಾಷೆಯ ‘ವಶ್​’ ಸಿನಿಮಾದ ಹಿಂದಿ ರಿಮೇಕ್​. ಹಾಗಿದ್ದರೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ.

Advertisement
Tags :
Advertisement