For the best experience, open
https://m.newskannada.com
on your mobile browser.
Advertisement

100 ಕೋಟಿ ಗಡಿ ತಲುಪಿದ ಅಜಯ್​ ದೇವಗನ್​ ನಟನೆಯ ಶೈತಾನ್

ಕಳೆದ ಶುಕ್ರವಾರ (ಮಾರ್ಚ್​ 8) ಬಿಡುಗಡೆಯಾದ ಶೈತಾನ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ವಿಶ್ವಾದ್ಯಂತ ‘ಶೈತಾನ್​’ ಕಲೆಕ್ಷನ್​ 100 ಕೋಟಿ ರೂಪಾಯಿಯಾಗಿದೆ ಎಂದು ವರದಿ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.
05:29 PM Mar 14, 2024 IST | Ashika S
100 ಕೋಟಿ ಗಡಿ ತಲುಪಿದ ಅಜಯ್​ ದೇವಗನ್​ ನಟನೆಯ ಶೈತಾನ್

ಮುಂಬೈ: ಕಳೆದ ಶುಕ್ರವಾರ (ಮಾರ್ಚ್​ 8) ಬಿಡುಗಡೆಯಾದ ಶೈತಾನ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ವಿಶ್ವಾದ್ಯಂತ ‘ಶೈತಾನ್​’ ಕಲೆಕ್ಷನ್​ 100 ಕೋಟಿ ರೂಪಾಯಿಯಾಗಿದೆ ಎಂದು ವರದಿ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.

Advertisement

ಅಜಯ್​ ದೇವಗನ್​ ನಟನೆಯ ‘ಶೈತಾನ್​’ ಸಿನಿಮಾದಲ್ಲಿ ಆರ್​. ಮಾಧವನ್​ ಅವರು ನೆಗೆಟಿವ್​ ಪಾತ್ರ ಮಾಡಿದ್ದರೆ, ಈ ಸಿನಿಮಾಗೆ ವಿಕಾಸ್​ ಬಹ್ಲ್ ಅವರು ನಿರ್ದೇಶನ ಮಾಡಿದ್ದಾರೆ. ಯುವತಿಯನ್ನು ವಶೀಕರಣ ಮಾಡುವ ಕಥೆ ಈ ಸಿನಿಮಾದಲ್ಲಿದೆ. ‘ಶೈತಾನ್​’ ಸಿನಿಮಾ  ಗುಜರಾತಿ ಭಾಷೆಯ ‘ವಶ್​’ ಸಿನಿಮಾದ ಬಾಲಿವುಡ್​ ರಿಮೇಕ್​.

ಮೊದಲ ದಿನ: 15.21 ಕೋಟಿ ರೂಪಾಯಿ. ಎರಡನೇ ದಿನ: 19.18 ಕೋಟಿ ರೂಪಾಯಿ. ಮೂರನೇ ದಿನ: 20.74 ಕೋಟಿ ರೂಪಾಯಿ. ನಾಲ್ಕನೇ ದಿನ: 7.81 ಕೋಟಿ ರೂಪಾಯಿ. ಐದನೇ ದಿನ: 6.27 ಕೋಟಿ ರೂಪಾಯಿ ಗಳಿಕೆ ಮಾಡಿದೆ.

Advertisement

6ನೇ ದಿನವೂ ‘ಶೈತಾನ್​’ ಚಿತ್ರ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಈವರೆಗೂ ಭಾರತದಲ್ಲಿ ಈ ಸಿನಿಮಾದ ಗಳಿಕೆ 80 ಕೋಟಿ ರೂಪಾಯಿ ಆಗಿದೆ ಎಂದು ಹೇಳಲಾಗುತ್ತಿದೆ.

ವಿದೇಶದಿಂದ 20 ಕೋಟಿ ರೂಪಾಯಿ ಆದಾಯ ಹರಿದುಬಂದಿರುವ ಬಗ್ಗೆ ವರದಿ ಆಗಿದೆ. ಎರಡೂ ಸೇರಿಸಿದರೆ ‘ಶೈತಾನ್​’ ಕಲೆಕ್ಷನ್​ 100 ಕೋಟಿ ರೂಪಾಯಿ ಗಡಿ ಮುಟ್ಟಿದೆ.

Advertisement
Tags :
Advertisement