For the best experience, open
https://m.newskannada.com
on your mobile browser.
Advertisement

2 ದಿನಕ್ಕೆ 34 ಕೋಟಿ ರೂಪಾಯಿ ಗಳಿಸಿದ ‘ಶೈತಾನ್​’ ಸಿನಿಮಾ

ನಟ ಅಜಯ್​ ದೇವಗನ್​  ನಟನೆಯ ಇತ್ತೀಚೆಗೆ ತೆರೆಕಂಡ ‘ಶೈತಾನ್​’  ಸಿನಿಮಾ ಸೂಪರ್​ ಹಿಟ್​ ಆಗಿದೆ. ಮೊದಲ ಎರಡು ದಿನ ‘ಶೈತಾನ್​’ ಚಿತ್ರಕ್ಕೆ ಉತ್ತಮ ಕಲೆಕ್ಷನ್​  ಆಗಿದೆ.
06:16 PM Mar 10, 2024 IST | Ashika S
2 ದಿನಕ್ಕೆ 34 ಕೋಟಿ ರೂಪಾಯಿ ಗಳಿಸಿದ ‘ಶೈತಾನ್​’ ಸಿನಿಮಾ

ಮುಂಬೈ: ನಟ ಅಜಯ್​ ದೇವಗನ್​  ನಟನೆಯ ಇತ್ತೀಚೆಗೆ ತೆರೆಕಂಡ ‘ಶೈತಾನ್​’  ಸಿನಿಮಾ ಸೂಪರ್​ ಹಿಟ್​ ಆಗಿದೆ. ಮೊದಲ ಎರಡು ದಿನ ‘ಶೈತಾನ್​’ ಚಿತ್ರಕ್ಕೆ ಉತ್ತಮ ಕಲೆಕ್ಷನ್​  ಆಗಿದೆ. ಈ ಸಿನಿಮಾ  3ನೇ ದಿನ ಒಂದು ಮ್ಯಾಜಿಕ್​ ಆಗುವ ನಿರೀಕ್ಷೆ ಇದೆ. ಬೆಚ್ಚಿ ಬೀಳಿಸುವಂತಹ ಹಾರರ್​ ಕಥಾಹಂದರ ಇರುವ ‘ಶೈತಾನ್​’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

Advertisement

ಮೊದಲ ದಿನ ಈ ಚಿತ್ರ 15.21 ಕೋಟಿ ರೂಪಾಯಿ ಗಳಿಸಿತು. ಎರಡನೇ ದಿನವಾದ ಶನಿವಾರ ವೀಕೆಂಡ್​ ಆದ್ದರಿಂದ ಭರ್ಜರಿ ಕಲೆಕ್ಷನ್​ ಆಯಿತು. ಅಂದು (ಮಾರ್ಚ್​ 09) ‘ಶೈತಾನ್​’ ಸಿನಿಮಾ ಬರೋಬ್ಬರಿ 19.18 ಕೋಟಿ ರೂಪಾಯಿ ಗಳಿಸಿತು.

ಮೂರನೇ ದಿನವಾರ ಮಾರ್ಚ್​ 10ರಂದು ಭಾನುವಾರ ಈ ಸಿನಿಮಾ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

Advertisement

ಅಜಯ್​ ದೇವಗನ್​  ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಜಯ್​ ದೇವಗನ್​ ಎದುರು ವಿಲನ್​ ಆಗಿ ಆರ್. ಮಾಧವನ್​ ಅಬ್ಬರಿಸಿದ್ದಾರೆ. ಅಜಯ್​ ದೇವಗನ್​ ಪತ್ನಿಯ ಪಾತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದಾರೆ.

Advertisement
Tags :
Advertisement