For the best experience, open
https://m.newskannada.com
on your mobile browser.
Advertisement

ಐಪಿಎಲ್​ನಿಂದ ಹೊರಬಿದ್ದ ವೇಗಿ ಮೊಹಮ್ಮದ್ ಶಮಿ..!

ಕಳೆದ ಏಕದಿನ ವಿಶ್ವಕಪ್ ನಲ್ಲಿ ಮಿಂಚಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವುದಿಲ್ಲ. ಈ ಬಗ್ಗೆ ವರದಿಯಾಗಿದೆ.
03:55 PM Feb 22, 2024 IST | Ashitha S
ಐಪಿಎಲ್​ನಿಂದ ಹೊರಬಿದ್ದ ವೇಗಿ ಮೊಹಮ್ಮದ್ ಶಮಿ

ಹೊಸದಿಲ್ಲಿ: ಕಳೆದ ಏಕದಿನ ವಿಶ್ವಕಪ್ ನಲ್ಲಿ ಮಿಂಚಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವುದಿಲ್ಲ. ಈ ಬಗ್ಗೆ ವರದಿಯಾಗಿದೆ.

Advertisement

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಎಡ ಪಾದದ ಗಾಯದಿಂದಾಗಿ ಬ್ರಿಟನ್‌ ನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕಳೆದೆರಡು ಆವೃತ್ತಿಗಳಿಂದ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಶಮಿ, ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದರು. ಆದರೀಗ ಶಮಿ ಅಲಭ್ಯತೆ ಗುಜರಾತ್ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಕಾಲಿನ ನೋವಿನಿಂದ ಬಳಲುತ್ತಿರುವ ಶಮಿ, ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇನ್ನು ಶಮಿ ಅಲಭ್ಯತೆಯ ಕಾರಣದಿಂದ ಗುಜರಾತ್ ಫ್ರಾಂಚೈಸಿಯು ಬದಲಿ ಆಟಗಾರನ ಹುಡುಕಾಟದಲ್ಲಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಬಿಕರಿಯಾಗದ ಆಟಗಾರನನ್ನು ಶಮಿ ಬದಲಿಯಾಗಿ ಖರೀದಿ ಮಾಡಬಹುದು ಎನ್ನಲಾಗ್ತಿದೆ.

Advertisement
Tags :
Advertisement