For the best experience, open
https://m.newskannada.com
on your mobile browser.
Advertisement

ಶರಣ್ ಅಭಿನಯದ ‘ಛೂ‌ ಮಂತರ್’ ಸಿನಿಮಾ ಏ. 5ಕ್ಕೆ ರಿಲೀಸ್

ಹಾಸ್ಯ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡು ಫೇಮಸ್ ಆಗಿರೋ ಶರಣ್ ಅವರು ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರ ನಟನೆಯ ನಟನೆಯ ಹಾರರ್ ಕಥೆ ಹೊಂದಿರುವ ‘ಛೂ‌ ಮಂತರ್’ ಸಿನಿಮಾ ಏಪ್ರಿಲ್ 5ಕ್ಕೆ  ರಿಲೀಸ್​ಆಗಲಿದೆ.
03:58 PM Mar 02, 2024 IST | Ashika S
ಶರಣ್ ಅಭಿನಯದ ‘ಛೂ‌ ಮಂತರ್’ ಸಿನಿಮಾ ಏ  5ಕ್ಕೆ ರಿಲೀಸ್

ಬೆಂಗಳೂರು: ಹಾಸ್ಯ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡು ಫೇಮಸ್ ಆಗಿರೋ ಶರಣ್ ಅವರು ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರ ನಟನೆಯ ನಟನೆಯ ಹಾರರ್ ಕಥೆ ಹೊಂದಿರುವ ‘ಛೂ‌ ಮಂತರ್’ ಸಿನಿಮಾ ಏಪ್ರಿಲ್ 5ಕ್ಕೆ  ರಿಲೀಸ್​ಆಗಲಿದೆ.

Advertisement

ತರುಣ್ ಸ್ಟುಡಿಯೋಸ್ ಬ್ಯಾನರ್​ ಅಡಿಯಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ‘ಛೂ ಮಂತರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ನವನೀತ್ ಅವರು ಶರಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಸಿನಿಮಾದಲ್ಲಿ ಇವರ ಕಾಂಬಿನೇಷನ್ ಇದೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

Advertisement

‘ಛೂ ಮಂತರ್’ ಸಿನಿಮಾ ರಿಲೀಸ್​ಗೆ ಒಂದು ತಿಂಗಳು ಬಾಕಿ ಇದೆ. ಹೀಗಾಗಿ, ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುವ ಕೆಲಸವನ್ನು ತಂಡ ಮಾಡುತ್ತಿದೆ. ಟೀಸರ್ ನೋಡಿದವರಿಗೆ ಸಿನಿಮಾದ ಗುಣಮಟ್ಟದ ಬಗ್ಗೆ ನಿರೀಕ್ಷೆ ಮೂಡುವಂತಾಗಿದೆ. ಶೀಘ್ರವೇ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.

Advertisement
Tags :
Advertisement