ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ

ಇತ್ತೀಚೆಗೆ ನಗರದಲ್ಲಿ ಹನುಮಾನ್‌ ಚಾಲೀಸಾ ಹಾಕಿದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆದಿತ್ತು ಈ ಬೆನ್ನಲ್ಲೆ ನಗರದ ಮತ್ತೊಂದು ಕಡೆ ಅನ್ಯಕೋಮಿ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿದೆ. ನಗರದ ಹೊರವಲಯ ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿಯೂ ಅಂತಹುದೇ ಘಟನೆ ನಡೆದಿದೆ.
11:26 AM Mar 21, 2024 IST | Nisarga K
ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಹನುಮಾನ್‌ ಚಾಲೀಸಾ ಹಾಕಿದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆದಿತ್ತು ಈ ಬೆನ್ನಲ್ಲೆ ನಗರದ ಮತ್ತೊಂದು ಕಡೆ ಅನ್ಯಕೋಮಿ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿದೆ. ನಗರದ ಹೊರವಲಯ ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿಯೂ ಅಂತಹುದೇ ಘಟನೆ ನಡೆದಿದೆ.

Advertisement

ಬಾಲಾಜಿ ಪ್ರಾವಿಷನ್ ಸ್ಟೋರ್ ಮಾಲೀಕ ಲಲಿತ್ ನಿನ್ನೆ ನಿಂಜಾ ಕಾರ್ಟ್ ನಲ್ಲಿ ತೆಂಗಿನಕಾಯಿ ಈರುಳ್ಳಿ ಸೇರಿದಂತೆ ತರಕಾರಿಗಳನ್ನು ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಬಾಯ್‌ ತಂದ ತೆಂಗಿನಕಾಯಿಯಲ್ಲಿ 700 ಗ್ರಾಂ ವ್ಯತ್ಯಾಸವಿತ್ತು.700 ಗ್ರಾಂ ತೆಂಗಿನಕಾಯಿಗೆ 30 ರೂಪಾಯಿ ಬೆಲೆ ಇದ್ದು, ಹಾಗಾಗಿ ಅಂಗಡಿ ಮಾಲೀಕ ಅದನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ದಾಳಿ ನಡೆದಿದ್ದ ಚಾಕಲೇಟ್‌ ಡಬ್ಬ ಮತ್ತು ಪೊರಕೆಯಿಂದ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಡೆಲಿವರಿ ಬಾಯ್‌ ತನ್ನ ಸ್ನೇಹಿತರನ್ನು ಕರೆಸಿ, ಸಂಪೂರ್ಣ ಬಿಲ್‌ ಪಾವತಿಸುವಂತೆ ಅವಾಜ್‌ ಹಾಕಿದ್ದಲ್ಲದೆ ಅಂಗಡಿಯನ್ನು ಪುಡಿ ಪುಡಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಲೆ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ತಕ್ಷಣವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಡೆಲಿವರಿ ಬಾಯ್‌ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇವರಲ್ಲಿ ಎಲ್ಲರೂ ಮುಸ್ಲಿಂ ಯುವಕರಿದ್ದು ವಿಷಯ ತಿಳಿದ ಹಿಂದೂ ಕಾರ್ಯಕರ್ತರು ಅವರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

ಎಲೆಕ್ಟ್ರಾನ್‌ ಸಿಟಿ ಪೊಲೀಸರು ಅವರ ಮೇಲೆ ಎಫ್‌ಐಆರ್‌ ದಾಖಲಿಸಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ.

 

Advertisement
Tags :
ANEKALattackbengaluruLatestNewsNewsKarnatakaownerShop
Advertisement
Next Article