For the best experience, open
https://m.newskannada.com
on your mobile browser.
Advertisement

ಏ. 20, 21 ರಂದು ಶ್ರೀ ವೈದ್ಯನಾಥ, ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ, ಪ್ರತಿಷ್ಠೆ ಕಲಶಾದಿಗಳು

ಇದೇ ಏಪ್ರೀಲ್‌ 20 ರಂದು ಹಾಗೂ 21 ರ ಆದಿತ್ಯವಾರದಂದು ಶ್ರೀ ವೈದ್ಯನಾಥ ಜಾನುಬೈದ್ಯ ಮತ್ತು ಕಲ್ಲುರ್ಟಿ, ಪಂಜುರ್ಲಿ ಕೊರತಿ ಸಹಿತ ಪರೊವಾರ ದೈವಗಳ ದೈವಸ್ಥಾನ ಕ್ರೋಟ್ರಗುತ್ತು ಭಂಡಾರ ಮನೆ. ಶ್ರೀ ವೈದ್ಯನಾಥ ಮತ್ತು ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ ಹಾಗೂ ಭಂಢಾರಗಳ ಪ್ರತಿಷ್ಠೆ ಕಲಶಾದಿಗಳು ವೇದಮೂರ್ತಿ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಥ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
05:05 PM Apr 19, 2024 IST | Ashitha S
ಏ  20  21 ರಂದು ಶ್ರೀ ವೈದ್ಯನಾಥ  ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ  ಪ್ರತಿಷ್ಠೆ ಕಲಶಾದಿಗಳು

ಮಂಗಳೂರು: ಇದೇ ಏಪ್ರೀಲ್‌ 20 ರಂದು ಹಾಗೂ 21 ರ ಆದಿತ್ಯವಾರದಂದು ಶ್ರೀ ವೈದ್ಯನಾಥ ಜಾನುಬೈದ್ಯ ಮತ್ತು ಕಲ್ಲುರ್ಟಿ, ಪಂಜುರ್ಲಿ ಕೊರತಿ ಸಹಿತ ಪರೊವಾರ ದೈವಗಳ ದೈವಸ್ಥಾನ ಕ್ರೋಟ್ರಗುತ್ತು ಭಂಡಾರ ಮನೆ. ಶ್ರೀ ವೈದ್ಯನಾಥ ಮತ್ತು ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ ಹಾಗೂ ಭಂಢಾರಗಳ ಪ್ರತಿಷ್ಠೆ ಕಲಶಾದಿಗಳು ವೇದಮೂರ್ತಿ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಥ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

Advertisement

ಏ. 20 ರಂದು ಬೆಳಿಗ್ಗೆ ಅನುಜ್ಞಾಕಲಶ, ಶಯ್ಯಪೂಜೆ ಗಣಹೋಮ ಜೀವೋಧ್ವಾಪನೆ, ಜೀವಕಳಶ, ಶಯ್ಯಾಗಮನ, ಶಯನ ನಡೆಯಲಿದ್ದು, ಸಂಜೆಪುನಯಾಹ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಧ್ಯಾನ್ಯಾಧಿವಾಸ, ಕಲಶ ಪೂಜೆ, ಕಲಶಾಧಿವಾಸ ನಡೆಯಲಿದೆ.

ಏ 21 ರಂದು ಬೆಳಿಗ್ಗೆ 8.33 ರಿಂದ ಭಂಡಾರಮನೆ ಪ್ರವೇಶ, ಸಾನಿಧ್ಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಸಾನಿಧ್ಯ ಕಲಶಾಭಿಷೇಕ, ಪರಿಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಷಣೆ ನಡೆಯಲಿದೆ.

Advertisement

ಏ. 21 ರಂದು ರಾತ್ರಿ 8;30 ರಿಂದ ಶ್ರೀ ಬೆಂಕಿಸಾಥೇಶ್ವರ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಬಾಳ, ಕಳವಾರು ಇವರು " ಶ್ರೀ ದೇವಿ ಮಹಾತ್ಮೆ" ಎಂಬ ಪುಣ್ಯ ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ.

Advertisement
Tags :
Advertisement