For the best experience, open
https://m.newskannada.com
on your mobile browser.
Advertisement

ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ

ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಶ್ರೀಮದ್ ರಾಮಾಯಣʼ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ 20ರಿಂದ ಸಂಜೆ 6 ಗಂಟೆಗೆ ಸೋಮವಾರದಿಂದ ಶನಿವಾರದವರೆಗೆ ಈ ಧಾರಾವಾಹಿ ಪ್ರಸಾರ ಆಗಲಿದ್ದು, ಇದರ ವೀಕ್ಷಕರಿಗೆ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗುತ್ತಿದೆ.
09:16 AM May 16, 2024 IST | Nisarga K
ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ
ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ

ಬೆಂಗಳೂರು: ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಶ್ರೀಮದ್ ರಾಮಾಯಣʼ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ 20ರಿಂದ ಸಂಜೆ 6 ಗಂಟೆಗೆ ಸೋಮವಾರದಿಂದ ಶನಿವಾರದವರೆಗೆ ಈ ಧಾರಾವಾಹಿ ಪ್ರಸಾರ ಆಗಲಿದ್ದು, ಇದರ ವೀಕ್ಷಕರಿಗೆ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗುತ್ತಿದೆ.

Advertisement

‘ಶ್ರೀಮದ್ ರಾಮಾಯಣ’ ಸೀರಿಯಲ್ ಪ್ರತಿ ಸಂಚಿಕೆಯಲ್ಲಿ 250 ವೀಕ್ಷಕರಿಗೆ ಒಟ್ಟೂ 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ‘ಉದಯ ಟಿವಿ’ ನೀಡುತ್ತಿದೆ. ಈ ಧಾರಾವಾಹಿಯನ್ನು ನೋಡಿ, ಸಂಚಿಕೆಯ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ಪ್ರತಿ ಎಪಿಸೋಡ್​ನಲ್ಲಿ ಅದೃಷ್ಟಶಾಲಿ 250 ವೀಕ್ಷಕರಿಗೆ ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಉದಯ ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಇಂದಿಗೂ ಪ್ರಸ್ತುತ ಆಗುವಂತಹ ಕಥೆ ರಾಮಾಯಣದ್ದು. ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಥೆ ಅದು. ರಾಮನ ಜೀವನದಿಂದ ನಾವು ಕಲಿಯಬಹುದಾದ ಅನೇಕ ನೀತಿಪಾಠ ಇದೆ. ರಾಮ ಹಾಗೂ ಸೀತೆಯ ಪವಿತ್ರ ಪ್ರೇಮಕಥೆ ಕೂಡ ಇದರಲ್ಲಿದೆ. ವೈಭವದಿಂದ ಕೂಡಿರುವ ರಾಮಾಯಣವನ್ನು ಪ್ರೇಕ್ಷಕರಿಗೆ ಅಷ್ಟೇ ವೈಭವದಿಂದ ತೋರಿಸಲು ಉದಯ ವಾಹಿನಿ ಸಜ್ಜಾಗಿದೆ.

Advertisement
Tags :
Advertisement