ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮತ್ತೆ ತಾಳ ತಪ್ಪಿದ "ಶ್ರುತಿ" ಹಾಸನ್ ಲೈಫ್

ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್ ತಮ್ಮ ಬಹು ಕಾಲದ ಗೆಳೆಯನಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗೂಗಲ್​ ಡೂಡಲ್​ ಕಲಾವಿದ, ಸಚಿತ್ರಕಾರ ಶಾಂತನು ಹಜಾರಿಕಾ ಅವರಿಂದ ಇದೀಗ ಬ್ರೇಕಪ್​ ಆಗಿದ್ದಾರೆ ಎಂದು ಗಾಸಿಪ್‌ ಗಳು ಹರಿದಾಡುತ್ತಿದೆ.
12:00 PM Apr 27, 2024 IST | Ashitha S

‌ಮುಂಬೈ: ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್ ತಮ್ಮ ಬಹು ಕಾಲದ ಗೆಳೆಯನಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗೂಗಲ್​ ಡೂಡಲ್​ ಕಲಾವಿದ, ಸಚಿತ್ರಕಾರ ಶಾಂತನು ಹಜಾರಿಕಾ ಅವರಿಂದ ಇದೀಗ ಬ್ರೇಕಪ್​ ಆಗಿದ್ದಾರೆ ಎಂದು ಗಾಸಿಪ್‌ ಗಳು ಹರಿದಾಡುತ್ತಿದೆ.

Advertisement

ಮೂರ್ನಾಲ್ಕು ವರ್ಷದ ಹಿಂದೆ ಶ್ರುತಿ ಹಾಸನ್​​ ಬ್ರಿಟಿಷ್​​​ ನಟ ಮೈಕಲ್​​ ಕೋರ್ಸೆಲ್​​ ಜೊತೆಗೆ ಪ್ರೀತಿಗೆ ಬಿದ್ದಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆ ಬಳಿಕ ಇಬ್ಬರ ಸಂಬಂಧವೂ ಮುರಿದು ಬಿತ್ತು.

ಮೈಕಲ್​ಗೆ ಗುಡ್​ ಬೈ ಹೇಳಿದ ಬಳಿಕ ಶ್ರುತಿ ಶಾಂತನು ಪ್ರೀತಿಯಲ್ಲಿ ಬಿದ್ದರು. ಇದನ್ನು ಎರಡು ವರ್ಷದ ಬಳಿಕ ಹೇಳಿಕೊಂಡಿದ್ದರು. ಅತ್ತ ಶಾಂತನು ಕೂಡ 2022ರಲ್ಲಿ ಇಬ್ಬರು ವಿವಾಹವಾಗಿರುವ ಬಗ್ಗೆ ಹೇಳಿದ್ದರು. ಆದರೀಗ ಶ್ರುತಿ ಮತ್ತು ಶಾಂತನು ನಡುವಿನ ಸಂಬಂಧ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನು ಶ್ರುತಿ ಹಾಸನ್​ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ ಶಾಂತನು ಜೊತೆಗಿರುವ ಫೋಟೋಗಳು ಡಿಲೀಟ್‌ ಆಗಿದೆ. ಹಾಗಾಗಿ ಮತ್ತೆ ಶೃತಿ ಲೈಫ್‌ ನ ತಾಳ ತಪ್ಪಿದೆ ಎಂದು ಹೇಳಲಾಗ್ತಿದೆ.

Advertisement

Advertisement
Tags :
broke upindiaLatestNewsNewsKarnatakaRumoursSantanuShruti
Advertisement
Next Article