For the best experience, open
https://m.newskannada.com
on your mobile browser.
Advertisement

ಗಲ್ಫ್ ಉದ್ಯೋಗಿ ಸಿದ್ದೀಕ್ ಕೊಲೆ ಪ್ರಕರಣ: ಆರೋಪಿ ಬಂಧನ

ಎರಡು ವರ್ಷಗಳ ಹಿಂದೆ ಪೈವಳಿಕೆಯಲ್ಲಿ ಗಲ್ಫ್ ಉದ್ಯೋಗಿಯಾದ ಸೀತಾಂಗೋಳಿಯ ಅಬೂಬಕ್ಕರ್ ಸಿದ್ದೀಕ್ ನನ್ನು ಥಳಿಸಿ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
01:31 PM Feb 08, 2024 IST | Gayathri SG
ಗಲ್ಫ್ ಉದ್ಯೋಗಿ ಸಿದ್ದೀಕ್ ಕೊಲೆ ಪ್ರಕರಣ  ಆರೋಪಿ ಬಂಧನ

ಕಾಸರಗೋಡು: ಎರಡು ವರ್ಷಗಳ ಹಿಂದೆ ಪೈವಳಿಕೆಯಲ್ಲಿ ಗಲ್ಫ್ ಉದ್ಯೋಗಿಯಾದ ಸೀತಾಂಗೋಳಿಯ ಅಬೂಬಕ್ಕರ್ ಸಿದ್ದೀಕ್ ನನ್ನು ಥಳಿಸಿ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ಪೈವಳಿಕೆಯ ನೂರ್ ಷಾ (39) ಬಂಧಿತ ಆರೋಪಿ. ಪೊಲೀಸ್ ಠಾಣೆಗೆ ಶರಣಾದ ಈತನನ್ನು ಬಂಧಿಸಲಾಗಿದೆ. ಈತ ಸೀತಾಂಗೋಳಿ ಮುಗುವಿನ ಸಿದ್ದೀಕ್ ನನ್ನು ಮರಕ್ಕೆ ಹಾಕಿ ಥಳಿಸಿ ಕೊಲೆಗೈದ ಆರೋಪಿಯಾಗಿದ್ದಾನೆ. ಚಿನ್ನಾಭರಣ ಸಾಗಾಟ ವ್ಯವಹಾರವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಸಿದ್ದೀಕ್ ನನ್ನು ಕೊಲೆಗೈದು ಮೃತ ದೇಹವನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ತೊರೆದು ಆರೋಪಿಗಳು ಪರಾರಿಯಾಗಿದ್ದರು.

ನೂರ್ ಷಾ ನೇತೃತ್ವದ 11 ಮಂದಿಯ ತಂಡವು ಈ ಕೃತ್ಯ ನಡೆಸಿತ್ತು. ಕಾರಿನಲ್ಲಿ ಅಪಹರಿಸಿದ್ದ ತಂಡ ಪೈವಳಿಕೆ ಯ ನಿರ್ಜನ ಸ್ಥಳಕ್ಕೆ ಕೊಂಡೊಯ್ದು ಕೃತ್ಯ ನಡೆಸಿತ್ತು. ಕೃತ್ಯದ ಬಳಿಕ ಬಹುತೇಕ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದರು. ನಾಲ್ವರು ಆರೋಪಿಗಳು ಇನ್ನೂ ತಲೆ ಮರೆಸಿ ಕೊಂಡಿದ್ದಾರೆ.

Advertisement

Advertisement
Tags :
Advertisement