ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಸಿದ್ದರಾಮಯ್ಯ ಹೆಸ್ರಲ್ಲಿ ರಾಮ ಇರಬಹುದು, ಆದ್ರೆ ಗುಣ ಇಲ್ಲ" ಎಂದ ಸಿಟಿ ರವಿ

ಭಾರತ ಮಾತ್ರವಲ್ಲ, ಇಡೀ ವಿಶ್ವವೇ ರಾಮಜನ್ಮಭೂಮಿ ಅಯೋಧ್ಯೆಯತ್ತ ಕಣ್ಣು ಹರಿಸಿವೆ. ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆ ಆಗಲಿದೆ. ಆದರೆ ರಾಜ್ಯದ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರು ರಾಮನ ಹೆಸರಲ್ಲಿ ರಾಜಕೀಯದ ರಾಮಾಯಣ ಶುರುವಿಟ್ಟುಕೊಂಡಿದ್ದಾರೆ.
10:36 PM Jan 02, 2024 IST | Ashitha S

ಬೆಂಗಳೂರು: ಭಾರತ ಮಾತ್ರವಲ್ಲ, ಇಡೀ ವಿಶ್ವವೇ ರಾಮಜನ್ಮಭೂಮಿ ಅಯೋಧ್ಯೆಯತ್ತ ಕಣ್ಣು ಹರಿಸಿವೆ. ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆ ಆಗಲಿದೆ. ಆದರೆ ರಾಜ್ಯದ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರು ರಾಮನ ಹೆಸರಲ್ಲಿ ರಾಜಕೀಯದ ರಾಮಾಯಣ ಶುರುವಿಟ್ಟುಕೊಂಡಿದ್ದಾರೆ.

Advertisement

ಜ.22ರಂದು ರಾಮಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ರಾಮರಾಜ್ಯ ಕಣ್ತುಂಬಿಕೊಳ್ಳಲು ಜಗತ್ತೇ ಎದುರು ನೋಡ್ತಿರಬೇಕಾದ್ರೆ ಆಹ್ವಾನದ ವಿಚಾರ ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಸಮರಕ್ಕೆ ಆಹ್ವಾನ ಕೊಟ್ಟಿದೆ. ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ ಅಂತ ಕಾಂಗ್ರೆಸ್ ಆರೋಪಿಸಿದೆ.

ಇತ್ತೀಚೆಗೆ ಕೊಪ್ಪಳದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗಿನ್ನೂ ಆಹ್ವಾನ ಬಂದಿಲ್ಲ. ಬಂದ್ರೆ ನೋಡೋಣ ಎಂದು ಹೇಳಿದ್ದರು. ಸಿದ್ದರಾಮಯ್ಯಗೆ ಆಹ್ವಾನ ನೀಡದ್ದಕ್ಕೆ ಕಾಂಗ್ರೆಸ್​ನ ಮಾಜಿ ಶಾಸಕ ಹೆಚ್​.ಆಂಜನೇಯ ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್.ಆಂಜನೇಯ ಅವರ ಈ ಮಾತು ಬಿಜೆಪಿಗರನ್ನ ಕೆರಳಿಸಿದೆ. ಆ ರಾಮ ಎಲ್ಲರಿಗೂ ನ್ಯಾಯ ಕೊಟ್ಟ, ವಿಶ್ವಾಸ ಇಟ್ಟ. ಆದ್ರೆ, ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ರಾ ಅಂತಾ ಸಿಟಿ ರವಿ ಪ್ರಶ್ನಿಸಿದ್ದಾರೆ.

ನಿಮ್ಮ ಹೆಸರು ಅಂಜನೇಯ, ನೀವು ಹೇಳಿದ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ ಅಂತ. ರಾಮ ಎಲ್ಲರಿಗೂ ನ್ಯಾಯ ಕೊಟ್ಟು, ಧರ್ಮದ ಪರ ಕೆಲಸ ಮಾಡಿದ್ದಾನೆ. ಆದರೆ ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ರಾ? ಸಿದ್ದರಾಮಯ್ಯ ಅವರು ದಲಿತರಿಗೆ ಅಂತ ಇಟ್ಟ 11 ಸಾವಿರ ಕೋಟಿ ವಾಪಸ್ಸು ತೆಗೆದುಕೊಂಡ್ರು, ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಇಟ್ಟರು. ಒಬ್ಬರಿಗೆ ಅನ್ಯಾಯ ಮಾಡುವವರೂ ರಾಮನಿಗೆ ಸಮಾನಾಗಲು ಸಾಧ್ಯನಾ? ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡ್ರು ಅಂತಾ 31 ವರ್ಷದ ನಂತ್ರ ಆ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ರಾಮನ ಹೆಸರು ಇಟ್ಕೊಂಡಿದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಅಗುತ್ತಾ? ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಆದ್ರೆ ಗುಣ ಇದೆಯಾ? ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

Advertisement
Tags :
BJPCongressLatestNewsNewsKannadaನವದೆಹಲಿಬೆಂಗಳೂರುರಾಮಸಿಟಿ ರವಿಸಿದ್ದರಾಮಯ್ಯ
Advertisement
Next Article