For the best experience, open
https://m.newskannada.com
on your mobile browser.
Advertisement

ಮೃತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿ ಅಲ್ಲ !

2022ರಲ್ಲಿ ಹತ್ಯೆಯಾಗಿದ್ದ ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿಯಲ್ಲ ಅದೊಂದು ವದಂತಿಯಷ್ಟೇ ಎಂಬುದು ತಿಳಿದುಬಂದಿದೆ. ಈ ಕುರಿತು ಅವರ ತಂದೆಯೇ ಸ್ಪಷ್ಟನೆ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ ಪೋಷಕರು ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೆಲವೇ ದಿನಗಳಲ್ಲಿ, ದಿವಂಗತ ಗಾಯಕನ ತಂದೆ ಇದೀಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಬರೆದಿದ್ದಾರೆ.
12:05 PM Mar 13, 2024 IST | Ashitha S
ಮೃತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿ ಅಲ್ಲ

ಪಂಜಾಬ್:‌  2022ರಲ್ಲಿ ಹತ್ಯೆಯಾಗಿದ್ದ ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿಯಲ್ಲ ಅದೊಂದು ವದಂತಿಯಷ್ಟೇ ಎಂಬುದು ತಿಳಿದುಬಂದಿದೆ. ಈ ಕುರಿತು ಅವರ ತಂದೆಯೇ ಸ್ಪಷ್ಟನೆ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ ಪೋಷಕರು ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೆಲವೇ ದಿನಗಳಲ್ಲಿ, ದಿವಂಗತ ಗಾಯಕನ ತಂದೆ ಇದೀಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಬರೆದಿದ್ದಾರೆ.

Advertisement

ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ನಮ್ಮ ಕುಟುಂಬದ ಬಗ್ಗೆ ಹಲವು ವದಂತಿಗಳನ್ನು ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2022 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಾನ್ಸಾದಿಂದ ಸ್ಪರ್ಧಿಸಿದ್ದ ಸಿಧು ಮೂಸೆವಾಲಾ ಅದೇ ವರ್ಷ ಮೇ 29 ರಂದು ದುರಂತವಾಗಿ ಹತ್ಯೆಯಾಗಿದ್ದರು. ಮೇ 29, 2022 ರಂದು, ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅವರ ಕಾರಿನಲ್ಲಿ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟಿದ್ದರು.

Advertisement

Advertisement
Tags :
Advertisement