For the best experience, open
https://m.newskannada.com
on your mobile browser.
Advertisement

ಗಂಡು ಮಗುವಿಗೆ ಜನ್ಮ ನೀಡಿದ ಗಾಯಕ ದಿ. ಸಿಧು ಮೂಸೆವಾಲಾ ತಾಯಿ

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮತ್ತೊಂದು ಜನ್ಮವೆತ್ತು ಬಂದಿದ್ದಾನೆ ಎಂದೇ ಪೋಷಕರು ನಂಬಿದ್ದಾರೆ. ಮಗುವಿನ ಜತೆಗಿರುವ ಚಿತ್ರವನ್ನು ಸಿಧು ಮೂಸೆವಾಲಾ ತಮದೆ ಬಲ್ಕೌರ್​ ಸಿಂಗ್ ಹಂಚಿಕೊಂಡಿದ್ದಾರೆ. ಶುಭದೀಪ್ (ಸಿಧು ಮೂಸೆವಾಲ)ನನ್ನು ಪ್ರೀತಿಸುವ ಕೋಟ್ಯಂತರ ಜನರ ಆಶೀರ್ವಾದದಿಂದ ದೇವರು ಶುಭ್ ಅವರ ಕಿರಿಯ ಸಹೋದರನನ್ನು ನಮ್ಮ ತೋಳಿನಲ್ಲಿ ಹಾಕಿದ್ದಾನೆ ಎಂದು ಬರೆದುಕೊಂಡಿದ್ದಾರೆ.
11:46 AM Mar 17, 2024 IST | Ashitha S
ಗಂಡು ಮಗುವಿಗೆ ಜನ್ಮ ನೀಡಿದ ಗಾಯಕ ದಿ  ಸಿಧು ಮೂಸೆವಾಲಾ ತಾಯಿ

ಪಂಜಾಬ್:‌ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮತ್ತೊಂದು ಜನ್ಮವೆತ್ತು ಬಂದಿದ್ದಾನೆ ಎಂದೇ ಪೋಷಕರು ನಂಬಿದ್ದಾರೆ. ಮಗುವಿನ ಜತೆಗಿರುವ ಚಿತ್ರವನ್ನು ಸಿಧು ಮೂಸೆವಾಲಾ ತಮದೆ ಬಲ್ಕೌರ್​ ಸಿಂಗ್ ಹಂಚಿಕೊಂಡಿದ್ದಾರೆ. ಶುಭದೀಪ್ (ಸಿಧು ಮೂಸೆವಾಲ)ನನ್ನು ಪ್ರೀತಿಸುವ ಕೋಟ್ಯಂತರ ಜನರ ಆಶೀರ್ವಾದದಿಂದ ದೇವರು ಶುಭ್ ಅವರ ಕಿರಿಯ ಸಹೋದರನನ್ನು ನಮ್ಮ ತೋಳಿನಲ್ಲಿ ಹಾಕಿದ್ದಾನೆ ಎಂದು ಬರೆದುಕೊಂಡಿದ್ದಾರೆ.

Advertisement

ಭಗವಂತನ ದಯೆಯಿಂದ ತಾಯಿ ಹಾಗೂ ಮಗು ಆರೋಗ್ಯವಾಗಿದೆ ಮತ್ತು ಎಲ್ಲಾ ಹಿತೈಷಿಗಳ ಅಪಾರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ. ವರದಿ ಪ್ರಕಾರ ಸಿಧು ಅವರ ತಾಯಿಗೆ 58 ಮತ್ತು ತಂದೆಗೆ 60 ವರ್ಷ.

2022 ರಲ್ಲಿ ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ವಿಫಲವಾದ ಮೂಸೆವಾಲಾ, ಅದೇ ವರ್ಷದ ಮೇ 29 ರಂದು ದುರಂತವಾಗಿ ಕೊಲೆಯಾದರು. ಮೇ 29, 2022 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅವರ ಕಾರಿನಲ್ಲಿ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು.
Advertisement
Advertisement
Tags :
Advertisement