For the best experience, open
https://m.newskannada.com
on your mobile browser.
Advertisement

ಸುರಂಗ ಕೊರೆಯುವಿಕೆ ಪೂರ್ಣ: ಶೀಘ್ರದಲ್ಲೇ ಹೊರಬರಲಿದ್ದಾರೆ 41 ಕಾರ್ಮಿಕರು

ಉತ್ತರಕಾಶಿ: ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತೆಗೆಯಲು ಎಲ್ಲ ರೀತಿಯ ಕಾರ್ಯಚರಣೆ ನಡೆಸಲಾಗಿದ್ದು, ಇದೀಗ ಎಲ್ಲ ಕಾರ್ಮಿಕರು  17ದಿನಗಳ ಬಳಿಕ ಸುರಕ್ಷಿತವಾಗಿ ಕೆಲವೇ ಕ್ಷಣದಲ್ಲಿ  ಹೊರಬರಲಿದ್ದಾರೆ ಎಂದು ಹೇಳಲಾಗಿದೆ.
03:15 PM Nov 28, 2023 IST | Ashitha S
ಸುರಂಗ ಕೊರೆಯುವಿಕೆ ಪೂರ್ಣ  ಶೀಘ್ರದಲ್ಲೇ ಹೊರಬರಲಿದ್ದಾರೆ 41 ಕಾರ್ಮಿಕರು

ಉತ್ತರಕಾಶಿ: ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತೆಗೆಯಲು ಎಲ್ಲ ರೀತಿಯ ಕಾರ್ಯಚರಣೆ ನಡೆಸಲಾಗಿದ್ದು, ಇದೀಗ ಎಲ್ಲ ಕಾರ್ಮಿಕರು  17ದಿನಗಳ ಬಳಿಕ ಸುರಕ್ಷಿತವಾಗಿ ಕೆಲವೇ ಕ್ಷಣದಲ್ಲಿ  ಹೊರಬರಲಿದ್ದಾರೆ ಎಂದು ಹೇಳಲಾಗಿದೆ.

Advertisement

ಈಗಾಗಲೇ ರಕ್ಷಣೆ ತಂಡ ತನ್ನ ಕಾರ್ಯವನ್ನು ಮುಂದುವರಿಸಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡಲಿದೆ ಎಂದು ಎನ್​​ಡಿಆರ್​​ಎಫ್​​​​ ಹೇಳಿದೆ. ಸುರಂಗದ ಒಳಗೆ ಎನ್​​​ಡಿಆರ್​ಎಫ್​​​​ ತಂಡ ಕೂಡ ಹೋಗಲಿದೆ ಎಂದು ಹೇಳಿದೆ. ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿಗಳು ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ.

ಅಧಿಕಾರಿಗಳು ನೀಡಿದ ವರದಿಗಳ ಪ್ರಕಾರ ಸುರಂಗದ ಒಳಗೆ ಮೊದಲು 41 ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗುವುದು. ಅಲ್ಲಿ ಅವರಿಗೆ ಬೇಕಾದ ಆಹಾರಗಳನ್ನು ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ. ಸುರಂಗದ ಹೊರಗೆ ಬರುತ್ತಿದ್ದಂತೆ ಅವರನ್ನು ಆಂಬ್ಯುಲೆನ್ಸ್​​​ ಮೂಕ ರಿಷಿಕೇಶ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಹೇಳಿದ್ದಾರೆ.

Advertisement

Advertisement
Tags :
Advertisement