For the best experience, open
https://m.newskannada.com
on your mobile browser.
Advertisement

ಐರ್ಲೆಂಡ್‌ನ ನೂತನ ಪ್ರಧಾನಿಯಾಗಿ ಸೈಮನ್ ಹ್ಯಾರಿಸ್ ಆಯ್ಕೆ

ಐರ್ಲೆಂಡ್ ದೇಶದ ನೂತನ ಪ್ರಧಾನಿಯಾಗಿ ಅತ್ಯಂತ ಕಿರಿಯ ವಯಸ್ಸಿನ ಸೈಮನ್ ಹ್ಯಾರಿಸ್ ಆಯ್ಕೆಯಾಗಿದ್ದಾರೆ.
01:51 PM Apr 10, 2024 IST | Chaitra Kulal
ಐರ್ಲೆಂಡ್‌ನ ನೂತನ ಪ್ರಧಾನಿಯಾಗಿ ಸೈಮನ್ ಹ್ಯಾರಿಸ್ ಆಯ್ಕೆ

ಡಬ್ಲಿನ್: ಐರ್ಲೆಂಡ್ ದೇಶದ ನೂತನ ಪ್ರಧಾನಿಯಾಗಿ ಅತ್ಯಂತ ಕಿರಿಯ ವಯಸ್ಸಿನ ಸೈಮನ್ ಹ್ಯಾರಿಸ್ ಆಯ್ಕೆಯಾಗಿದ್ದಾರೆ.

Advertisement

ಪ್ರಧಾನಿ ಲಿಯೊ ವರಾಡ್ಕರ್ ಇತ್ತೀಚೆಗೆ ದಿಢೀರ್ ಪದತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೂತನ ಪ್ರಧಾನಿ ಆಯ್ಕೆಗೆ ಸಂಸತ್ತಿನಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ 88–69 ಮತಗಳಿಂದ 37 ವರ್ಷದ ಸೈಮನ್ ಆಯ್ಕೆಯಾಗಿದ್ದಾರೆ.

ಆರೋಗ್ಯ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿ ಕೆಲಸ ಮಾಡಿರುವ ಸೈಮನ್, ಕೋವಿಡ್ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದರು. ಕಳೆದ ತಿಂಗಳು ಸೆಂಟರ್‌–ರೈಟ್ ಫೈನ್ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

Advertisement

ದೇಶ ಸೇವೆಗೆ ನನ್ನನ್ನು ಆಯ್ಕೆ ಮಾಡಿರುವ ಈ ನಿರ್ಧಾರ ಒಪ್ಪಿಕೊಳ್ಳುತ್ತೇನೆ. 'ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಗೌರವಿಸಲು ಬೇಕಾದ ಎಲ್ಲವನ್ನೂ ಮಾಡಲು ನಾನು ಬದ್ಧನಾಗಿದ್ದೇನೆ’ಎಂದು ಅವರು ಸಂಸತ್ ಸದಸ್ಯರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Advertisement
Tags :
Advertisement