For the best experience, open
https://m.newskannada.com
on your mobile browser.
Advertisement

ಪ್ಯಾರಿಸ್ ಒಲಿಂಪಿಕ್ಸ್‌ : ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಸ್ಟಾರ್​ ಶಟ್ಲರ್​, ಪಿ.ವಿ.ಸಿಂಧು ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.
10:21 PM Jul 08, 2024 IST | Chaitra Kulal
ಪ್ಯಾರಿಸ್ ಒಲಿಂಪಿಕ್ಸ್‌   ಸಿಂಧು  ಶರತ್ ಕಮಲ್ ಭಾರತದ ಧ್ವಜಧಾರಿ

ನವದೆಹಲಿ: ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಸ್ಟಾರ್​ ಶಟ್ಲರ್​, ಪಿ.ವಿ.ಸಿಂಧು ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

Advertisement

ಮಾಜಿ ಒಲಿಂಪಿಕ್ಸ್​ ಪದಕ ವಿಜೇತ ಶೂಟರ್​ ಗಗನ್​ ನಾರಂಗ್​ ಅವರನ್ನು ತಂಡದ ಷೆಫ್ ಡಿ ಮಿಷನ್ ಆಗಿ ಸೋಮವಾರ ನೇಮಿಸಲಾಗಿದೆ. ವೈಯಕ್ತಿಕ ಕಾರಣ ನೀಡಿ 2 ತಿಂಗಳ ಹಿಂದೆ ಮೇರಿ ಕೋಮ್ ಅವರು ಷೆಫ್ ಡಿ ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಈ ಸ್ಥಾನಕ್ಕೆ 2012 ಲಂಡನ್​ ಒಲಿಂಪಿಕ್ಸ್​ ಟೂರ್ನಿಯಲ್ಲಿ 10 ಮೀ. ಏರ್​ ರೈಫಲ್​ ಸ್ಫರ್ದೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಗಗನ್​ ನಾರಂಗ್​ ಅವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೂ ಮುನ್ನ ನಾರಂಗ್ ಉಪ ಸಿಡಿಎಂ ಸ್ಥಾನ ಹೊಂದಿದ್ದರು. ಬಡ್ತಿ ನೀಡುವ ಮೂಲಕ ಷೆಫ್ ಡಿ ಮಿಷನ್ ನೀಡಲಾಗಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ​​ ಅಧ್ಯಕ್ಷೆ ಪಿಟಿ ಉಷಾ ಈ ವಿಚಾರವನ್ನು ಅಧಿಕೃತ ಪ್ರಕಟನೆ ಮೂಲಕ ತಿಳಿಸಿದ್ದಾರೆ.

Advertisement

“ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳೆಯಾಗಿರುವ ಸಿಂಧು ಅವರು ಆರಂಭಿಕ ಸಮಾರಂಭದಲ್ಲಿ ಶರತ್ ಕಮಲ್ ಅವರೊಂದಿಗೆ ಮಹಿಳಾ ಧ್ವಜಧಾರಿಯಾಗಿ ಘೋಷಿಸಲು ಸಂತೋಷಪಡುತ್ತೇನೆ. ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಲು ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ನನಗೆ ವಿಶ್ವಾಸವಿದೆ”ಎಂದು ಪಿಟಿ ಉಷಾ ಹೇಳಿದ್ದಾರೆ.

ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 30 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​” ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

Advertisement
Tags :
Advertisement