For the best experience, open
https://m.newskannada.com
on your mobile browser.
Advertisement

ಸಿಂಗಾಪುರ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವುದಾಗಿ ಲೀ ಘೋಷಣೆ

ಪ್ರಧಾನಿ ಲೀ ಸೀಯೆನ್‌ ಲೂಂಗ್‌ ಅವರು ಅಧಿಕಾರದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ, ಉಪ ಪ್ರಧಾನಿ ಲಾರೆನ್ಸ್‌ ವಾಂಗ್‌ ಅವರು ಸಿಂಗಪುರದ ಮುಂದಿನ ಪ್ರಧಾನಿಯಾಗಲಿದ್ದಾರೆ.
03:42 PM Apr 15, 2024 IST | Ashitha S
ಸಿಂಗಾಪುರ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವುದಾಗಿ ಲೀ ಘೋಷಣೆ

ಸಿಂಗಾಪುರ: ಪ್ರಧಾನಿ ಲೀ ಸೀಯೆನ್‌ ಲೂಂಗ್‌ ಅವರು ಅಧಿಕಾರದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ, ಉಪ ಪ್ರಧಾನಿ ಲಾರೆನ್ಸ್‌ ವಾಂಗ್‌ ಅವರು ಸಿಂಗಪುರದ ಮುಂದಿನ ಪ್ರಧಾನಿಯಾಗಲಿದ್ದಾರೆ.

Advertisement

ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಲೀ, '2024ರ ಮೇ 15ರಂದು ಪ್ರಧಾನಿ ಸ್ಥಾನ ತೊರೆಯಲಿದ್ದೇನೆ. ಲಾರೆನ್ಸ್‌ ವಾಂಗ್‌ ಅವರು ಅದೇ ದಿನ ಮುಂದಿನ ಪ್ರಧಾನಿಯಾಗಿ ಅಧಿಕಾರಕ್ಕೇರಲಿದ್ದಾರೆ' ಎಂದು ತಿಳಿಸಿದ್ದಾರೆ.

'ಲಾರೆನ್ಸ್‌ ಹಾಗೂ ಅವರ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಜೊತೆಗೆ, ಸಿಂಗಪುರದ ಉಜ್ವಲ ಭವಿಷ್ಯಕ್ಕಾಗಿ ಅವರೊಂದಿಗೆ ಕೆಲಸ ಮಾಡಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡುತ್ತೇನೆ' ಎಂದೂ ಹೇಳಿದ್ದಾರೆ.

Advertisement

ಹಣಕಾಸು ಸಚಿವರೂ ಆಗಿರುವ ವಾಂಗ್‌ ಅವರನ್ನು ಲೀ ಅವರ ವಾರಸುದಾರರನ್ನಾಗಿ ಪೀಪಲ್ಸ್‌ ಆಯಕ್ಷನ್‌ ಪಕ್ಷದ (ಪಿಎಪಿ) ಸಂಸದರು 2022ರಲ್ಲೇ ಆಯ್ಕೆ ಮಾಡಿದ್ದಾರೆ. ಸಿಂಗಪುರಕ್ಕೆ 1965ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಪಕ್ಷವೇ ಅಧಿಕಾರದಲ್ಲಿದೆ.

ಲೀ ಸೀಯೆನ್‌ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ವಾಂಗ್, 'ಈ ಜವಾಬ್ದಾರಿಯನ್ನು ಅತ್ಯಂತ ವಿನಯದಿಂದ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಸ್ವೀಕರಿಸುತ್ತೇನೆ. ನಿಮಗಾಗಿ (ಜನರಿಗಾಗಿ) ನನ್ನಿಂದ ಸಾಧ್ಯವಾದಷ್ಟನ್ನು ಮಾಡುವ ಪ್ರತಿಜ್ಞೆಗೈಯ್ಯುತ್ತೇನೆ' ಎಂದಿದ್ದಾರೆ.

Advertisement
Tags :
Advertisement