For the best experience, open
https://m.newskannada.com
on your mobile browser.
Advertisement

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.
04:44 PM May 12, 2024 IST | Ashika S
ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ  ಬಸವರಾಜ ಬೊಮ್ಮಾಯಿ

ಬೆಂಗಳೂರು: ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣವನ್ನು ಯಾರೂ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ.  ಮಾಹಿತಿ ಕೊಟ್ಟವರನ್ನೇ ಬಂಧನ ಮಾಡ್ತಿದ್ದಾರೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಅಂದರೆ ಸಿಬಿಐಗೆ  ವಹಿಸಲಿ ಎಂದು ತಿಳಿಸಿದರು.

ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯರ‍್ಯಾರ ಹೆಸರು ಕೇಳಿಬರುತ್ತಿದೆಯೋ ಅವರ ವಿಚಾರಣೆಯನ್ನೂ ಮಾಡಲಿ. ಅದಕ್ಕೆ ನಾವು ಪ್ರಕರಣವನ್ನು ಸಿಬಿಐಗೆ ಕೊಡಲಿ ಅಂತಾ ಕೇಳುತ್ತಿರುವುದು. ಡಿಕೆಶಿ ವಿಚಾರಣೆಯೂ ಮಾಡಬೇಕು ಎಂಬ ಕೆಲವರ ಆಗ್ರಹವನ್ನು ಬೊಮ್ಮಾಯಿ ಸಮರ್ಥಿಸಿಕೊಂಡರು.

Advertisement

ಪರಿಷತ್ ಚುನಾವಣೆಗೆ ಟಿಕೆಟ್ ಸಂಬಂಧ ಕೆಲವರ ಅಸಮಾಧಾನ ವಿಚಾರವಾಗಿ ಮಾತನಾಡಿ, ಪರಿಷತ್‌ಗೆ ಹಲವರು ಆಕಾಂಕ್ಷಿಗಳು ಇದ್ದರು. ಟಿಕೆಟ್ ಕೈತಪ್ಪಿದಾಗ ಸಹಜವಾಗಿ ಬೇಸರ ಆಗುತ್ತೆ, ಸರಿ ಹೋಗುತ್ತದೆ. ಮೈತ್ರಿ ಬಗ್ಗೆ ವರಿಷ್ಠರು ಯಾವ ರೀತಿ ತೀರ್ಮಾನ ಮಾಡಿದ್ದಾರೋ ಅದರಂತೆ ನಡೆಯುತ್ತದೆ ಎಂದರು.

Advertisement
Tags :
Advertisement