For the best experience, open
https://m.newskannada.com
on your mobile browser.
Advertisement

ಅಮೆರಿಕದಲ್ಲಿ ರಸ್ತೆ ಅಪಘಾತ: ಆಂಧ್ರ ಮೂಲದ ಒಂದೇ ಕುಟುಂಬದ 6 ಮಂದಿ ಸಾವು

ಅಮೆರಿಕದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವ ಘಟನೆ ಜಾನ್ಸನ್ ಕೌಂಟಿಯಲ್ಲಿ ವರದಿಯಾಗಿದೆ.
07:24 AM Dec 28, 2023 IST | Ashika S
ಅಮೆರಿಕದಲ್ಲಿ ರಸ್ತೆ ಅಪಘಾತ  ಆಂಧ್ರ ಮೂಲದ ಒಂದೇ ಕುಟುಂಬದ 6 ಮಂದಿ ಸಾವು

ಅಮೆರಿಕ: ಅಮೆರಿಕದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವ ಘಟನೆ ಜಾನ್ಸನ್ ಕೌಂಟಿಯಲ್ಲಿ ವರದಿಯಾಗಿದೆ.

Advertisement

ಮೃತರು ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದರು, ಬೆಳಗ್ಗೆ ಮೃಗಾಲಯಕ್ಕೆ ಹೋಗಿದ್ದರು, ಹಿಂದಿರುಗುವಾಗ ಮಿನಿವ್ಯಾನ್ ಹಾಗೂ ಪಿಕ್​ ಅಪ್ ಟ್ರಕ್​ ನಡುವೆ ಡಿಕ್ಕಿ ಸಂಭವಿಸಿತ್ತು.

ಕುಟುಂಬದ ಆರು ಸದಸ್ಯರು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರ ಸಂಬಂಧಿಕರಾಗಿದ್ದರು ಎನ್ನಲಾಗಿದೆ.

Advertisement

ಪವಾಡಸದೃಶವೆಂಬಂತೆ ಲೋಕೇಶ್​ ಎಂಬುವವರ ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಂಧ್ರಪ್ರದೇಶದ ಮುಮ್ಮಿಡಿವರಂ ಕ್ಷೇತ್ರದ ಶಾಸಕರಾದ ಕುಮಾರ್ ಅವರು ಮಾತನಾಡಿ, ನಾವು ಮೃತದೇಹಗಳನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದೇವೆ. ಲೋಕೇಶ್ ಇನ್ನೂ ಚಿಕಿತ್ಸೆ ಪಡೆಯುತ್ತಿರುವುದರಿಂದ,  ಇಬ್ಬರಿಗೆ ಅವರ ಒಪ್ಪಂದದ ಅಗತ್ಯವಿದೆ, ಅವರು ಹುಟ್ಟಿನಿಂದಲೇ ಅಮೆರಿಕನ್ ಪ್ರಜೆಗಳು ಎಂದು ಹೇಳಿದರು.

Advertisement
Tags :
Advertisement