ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾಲ್‌ಗೆ ನುಗ್ಗಿದ ದುಷ್ಕರ್ಮಿ ಸಿಕ್ಕಸಿಕ್ಕವರಿಗೆ ಚೂರಿ ಇರಿತ : ಆರು ಮಂದಿ ಬಲಿ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಚ್ಚಿಬೀಳುವ ಘಟನೆ ನಡೆದಿದೆ.ಶನಿವಾರ (ಏಪ್ರಿಲ್‌ 13) ವ್ಯಕ್ತಿಯೊಬ್ಬ ಶಾಪಿಂಗ್‌ ಮಾಲ್‌ನಲ್ಲಿ ದಾಳಿ ನಡೆಸಿ ಸಿಕ್ಕಸಿಕ್ಕವರಿಗೆ ಚೂರಿಯಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಕೊನೆಗೂ ದಾಳಿ ನಡೆಸಿದ ವ್ಯಕ್ತಿಗೆ ಗುಂಡಿಟ್ಟು ಹತ್ಯೆ ಮಾಡುವಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಯಶಸ್ವಿಯಾಗಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾರೆ.
06:31 PM Apr 13, 2024 IST | Nisarga K
ಮಾಲ್‌ಗೆ ನುಗ್ಗಿದ ದುಷ್ಕರ್ಮಿ ಸಿಕ್ಕಸಿಕ್ಕವರಿಗೆ ಚೂರಿ ಇರಿತ : ಆರು ಮಂದಿ ಬಲಿ

ಸಿಡ್ನಿ:  ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಚ್ಚಿಬೀಳುವ ಘಟನೆ ನಡೆದಿದೆ.ಶನಿವಾರ (ಏಪ್ರಿಲ್‌ 13) ವ್ಯಕ್ತಿಯೊಬ್ಬ ಶಾಪಿಂಗ್‌ ಮಾಲ್‌ನಲ್ಲಿ ದಾಳಿ ನಡೆಸಿ ಸಿಕ್ಕಸಿಕ್ಕವರಿಗೆ ಚೂರಿಯಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಕೊನೆಗೂ ದಾಳಿ ನಡೆಸಿದ ವ್ಯಕ್ತಿಗೆ ಗುಂಡಿಟ್ಟು ಹತ್ಯೆ ಮಾಡುವಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಯಶಸ್ವಿಯಾಗಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾರೆ.

Advertisement

ಈ ಘಟನೆ ವೆಸ್ಟ್‌ಫೋಲ್ಡ್‌ ಬೊಂಡಿ ಜಂಕ್ಷನ್ ಮಾಲ್ ನಲ್ಲಿ ನಡೆದಿದೆ.ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ʼʼದುಷ್ಕರ್ಮಿಯನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ಪ್ರಯತ್ನ ಮಾಡಿದ್ದರು. ಆಗ ಆತ ಪೊಲೀಸರ ಮೇಲೆಯೇ ಪ್ರತಿ ದಾಳಿ ನಡೆಸಿದ್ದ. ಕೊನೆಗೆ ಅನಿವಾರ್ಯವಾಗಿ ಪೊಲೀಸರು ಆತನಿಗೆ ಗುಂಡು ಹಾರಿಸ ಬೇಕಾಯ್ತು.

Advertisement

ಸದ್ಯ ಘಟನೆ ನಡೆದ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್ ಮಾಲ್ ಕಾಂಪ್ಲೆಕ್ಸ್‌ನಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ದಾಳಿ ವೇಳೆ ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಪೈಕಿ ಎಂಟು ತಿಂಗಳ ಮಗು ಕೂಡ ಸೇರಿದೆ

 

Advertisement
Tags :
ASTRALLIAattackcriminaldeathLatestNewsmallNewsKarnatakaprople
Advertisement
Next Article