For the best experience, open
https://m.newskannada.com
on your mobile browser.
Advertisement

ಕಣ್ಣು ಮಿಟುಕಿಸುತ್ತಾ ಮುಗುಳ್ನಕ್ಕ ಬಾಲರಾಮನ ವಿಡಿಯೋ ವೈರಲ್‌ !

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಾಕಾರಗೊಂಡಿದ್ದು, ಸೋಮವಾರಂದು ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ.
04:58 PM Jan 23, 2024 IST | Ashitha S
ಕಣ್ಣು ಮಿಟುಕಿಸುತ್ತಾ ಮುಗುಳ್ನಕ್ಕ ಬಾಲರಾಮನ ವಿಡಿಯೋ ವೈರಲ್‌

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಾಕಾರಗೊಂಡಿದ್ದು, ಸೋಮವಾರಂದು ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ.

Advertisement

ಈ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ರಾಮ ಭಕ್ತರು ಭಾವುಕರಾಗಿದ್ದಾರೆ. ಅಲ್ಲದೆ ಬಾಲ ರಾಮನ ಸುಂದರ ಮೂರ್ತಿಯನ್ನು ಕಂಡು ರಾಮ ಭಕ್ತರ ಕಣ್ಣಲ್ಲಿ ಆನಂದ ಭಾಷ್ಪವೇ ಹರಿದಿದೆ.

ಈ ನಡುವೆ ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತಹ ಬಾಲ ರಾಮನ ಮೂರ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಲಾವಿದನ ಕಲ್ಪನೆಯಲ್ಲಿ ಮೂಡಿದ ನಗು ಮೊಗದ ಬಾಲ ರಾಮನನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.

Advertisement

ಹೌದು. . @happymi ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತ ರಾಮ ಲಲ್ಲಾ ಮೂರ್ತಿಯು ಸುಂದರ ವಿಡಿಯೋವೊಂದನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಂತಹ ಬಾಲ ರಾಮನ ಮೂರ್ತಿಯು ಕಣ್ಣು ಮಿಟುಕಿಸುತ್ತಾ, ಮುಗುಳ್ನಗೆ ಬೀರುತ್ತಿರುವ ಮನಮೋಹಕ ದೃಶ್ಯ ಕಂಡು ಮೈ ರೋಮಾಂಚನಗೊಂಡಿದೆ.

Advertisement
Tags :
Advertisement