ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‌ವಿಮಾನದಲ್ಲಿ ಹಾವು ಪ್ರತ್ಯಕ್ಷ :ವಿಡಿಯೋ ವೈರಲ್

ಬ್ಯಾಂಕಾಕ್‌ನಿಂದ ಫುಕೆಟ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ತಮ್ಮ ಸಣ್ಣಪುಟ್ಟ ಲಗೇಜ್​ ಇಡುವ ಮೇಲಿನ ಕ್ಯಾಬಿನ್​​​ನಲ್ಲಿ ಹಾವು ಕಾಣಿಸಿಕೊಂಡಿತ್ತು.
04:27 PM Jan 20, 2024 IST | Ramya Bolantoor

ಬ್ಯಾಂಕಾಕ್‌ನಿಂದ ಫುಕೆಟ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ತಮ್ಮ ಸಣ್ಣಪುಟ್ಟ ಲಗೇಜ್​ ಇಡುವ ಮೇಲಿನ ಕ್ಯಾಬಿನ್​​​ನಲ್ಲಿ ಹಾವು ಕಾಣಿಸಿಕೊಂಡಿತ್ತು. ಅದನ್ನು ಅವರು ವಿಡಿಯೋ ರೀಲ್‌ ಮಾಡುತ್ತಾ, ರಕ್ಷಿಸಿದ್ದಾರೆ. ಜೊತೆಗೆ ಪ್ರಯಾಣಿಕರನ್ನೂ ರಕ್ಷಿಸಿದ್ದಾರೆ.

Advertisement

ವಿಮಾನ ಟೇಕ್ ಆಫ್ ಆಗುತ್ತಿರುವಾಗಲೇ ಸಿಬ್ಬಂದಿ ಅದನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಸೆರೆ ಹಿಡಿದಿದ್ದಾರೆ. ವಿಮಾನ ಲ್ಯಾಂಡ್ ಆದ ಕೂಡಲೇ ಹೆಚ್ಚಿನ ಪರಾಮರ್ಷೆ ಮಾಡಿ ಅದು ವಿಷಕಾರಿಯಲ್ಲ ಎಂದು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ವಿಮಾನಗಳು ಹೊರಡಲು ಸಿದ್ಧವಾದಾಗ ಫುಕೆಟ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕ್ಯಾರಿ-ಆನ್ ಲಗೇಜ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿತ್ತು. ಆದರೂ ಹಾವು ಹೇಗೆ ಒಳಗೆ ನುಸುಳಿ ಬಂದಿತ್ತು ಎಂಬುದು ನಿಗೂಢವಾಗಿದೆ.

ಈ ವಿಡಿಯೋವನ್ನು ತನ್ನ ಫೋನ್‌ನಲ್ಲಿ ಆ ಪ್ರಯಾಣಿಕ ತೆಗೆದಿರಿಸಿಕೊಂಡಿದ್ದಾರೆ. ಅದನ್ನು ತಮ್ಮ ವೈಯಕ್ತಿಕ ರೀಲ್ಸ್ ಖಾತೆಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Advertisement
Tags :
LatestNewsNewsKannadaವಿಮಾನ
Advertisement
Next Article