ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಮಾಡಿ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,  ದೇಹವನ್ನು ತಂಪಾಗಿಸಲು ರಾಗಿ ಅಂಬಲಿಯನ್ನು ಕುಡಿಯುವುದು ಉತ್ತಮ. ಬೇಸಿಗೆ ಸಮಯದಲ್ಲಿ  ದೇಹದ ಆಲಸ್ಯ ಮತ್ತು ದಣಿವು ಕಡಿಮೆ ಮಾಡಲು ಇದು ಸಹಕಾರಿ. 
05:20 PM Mar 25, 2024 IST | Chaitra Kulal

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,  ದೇಹವನ್ನು ತಂಪಾಗಿಸಲು ರಾಗಿ ಅಂಬಲಿಯನ್ನು ಕುಡಿಯುವುದು ಉತ್ತಮ. ಬೇಸಿಗೆ ಸಮಯದಲ್ಲಿ  ದೇಹದ ಆಲಸ್ಯ ಮತ್ತು ದಣಿವು ಕಡಿಮೆ ಮಾಡಲು ಇದು ಸಹಕಾರಿ.

Advertisement

ರಾಗಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಆರೋಗ್ಯಕರವಾದ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌ಗಳು, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಪ್ರೋಟೀನ್‌ಗಳನ್ನು ಒಳಗೊಂಡಿದೆ. ರಾಗಿ ಅಂಬಲಿ ಬೆಳಗಿನಜಾವ ಉಪಾಹಾರಕ್ಕೆ ಮಾತ್ರವಲ್ಲ ರಾತ್ರಿಯ ಊಟಕ್ಕೂ ಒಳ್ಳೆಯದು. ಹಾಗಾಗಿ ಗೋಧಿ ಹಿಟ್ಟು ಇಷ್ಟಪಡದವರು ರಾಗಿ ಹಿಟ್ಟನ್ನೂ ಬಳಸಬಹುದು.

ಬೇಸಿಗೆಯಲ್ಲಿ ಬಿಸಿ ಆಹಾರಗಳು, ಮಸಾಲೆಯುಕ್ತ ಆಹಾರಗಳು ಮತ್ತು ಜಂಕ್ ಫುಡ್ಗಳನ್ನು ಕಡಿಮೆ ಮಾಡಬೇಕು. ರಾಗಿ ಅಂಬಲಿ ಕುಡಿಯುವುದರಿಂದ ಹೊಟ್ಟೆಗೆ ತುಂಬಾ ಆರಾಮದಾಯಕ ಮತ್ತು ತಂಪಾಗಿರುತ್ತದೆ.ರಾಗಿ ಅಂಬಲಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ನೀವು ರಾಗಿ ಅಂಬಲಿಯನ್ನು ಒಂದು ಲೋಟ ಕುಡಿದರೂ ನಾಲ್ಕು ಗಂಟೆಯಾದರೂ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಭಾವನೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.

Advertisement

ಬೇಸಿಗೆಯಲ್ಲಿ ಮಾತ್ರವಲ್ಲದೆ ಪ್ರತಿನಿತ್ಯ ರಾಗಿ ಜಾವ ಕುಡಿದರೆ ಎಲುಬುಗಳು ಕೂಡ ಆರೋಗ್ಯಕರವಾಗಿರುತ್ತದೆ. ದೇಹವನ್ನು ಬಲವಾಗಿಸುವುದರ ಜತೆ ಗಟ್ಟಿಮುಟ್ಟಾಗಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ರಾಗಿ ಅಂಬಲಿ ಕುಡಿಯುವುದರಿಂದ ಶುಗರ್ ಕಂಟ್ರೋಲ್ ಆಗುತ್ತದೆ.

Advertisement
Tags :
HEALTHLatestNewsNewsKarnatakaRagi Ambali
Advertisement
Next Article