For the best experience, open
https://m.newskannada.com
on your mobile browser.
Advertisement

ಕೃಷಿ ನೀರಾವರಿಗೆ ಸೌರವಿದ್ಯುತ್‌ ಚಾಲಿತ ಪಂಪ್‌ ಅಳವಡಿಕೆ: ಹೀಗೆ ಅರ್ಜಿ ಸಲ್ಲಿಸಿ

ರೈತರಿಗೆ ಸಹಾಯ ಮಾಡುವ ಹಿತದೃಷ್ಟಿಯಿಂದ ಪ್ರಧಾನ್‌ ಮಂತ್ರಿ ಪ್ರಧಾನಮಂತ್ರಿ ಕುಸುಮ್‌ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್‌ ಚಾಲಿತ ಪಂಪ್‌ ಅಳವಡಿಕೆಗೆ ಹೊಸ ಟೆಂಡರ್‌ ಗಳನ್ನು ಬಿಡುಗಡೆಮಾಡಲಾಗಿದ್ದು.ಮೊಬೈಲ್‌ ಆ್ಯಪ್‌ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ.
10:23 AM Mar 11, 2024 IST | Nisarga K
ಕೃಷಿ ನೀರಾವರಿಗೆ ಸೌರವಿದ್ಯುತ್‌ ಚಾಲಿತ ಪಂಪ್‌ ಅಳವಡಿಕೆ  ಹೀಗೆ ಅರ್ಜಿ ಸಲ್ಲಿಸಿ
ಕೃಷಿ ನೀರಾವರಿಗೆ ಸೌರವಿದ್ಯುತ್‌ ಚಾಲಿತ ಪಂಪ್‌ ಅಳವಡಿಕೆ:ಆ್ಯಪ್‌ ಮೂಲಕ ಅರ್ಜಿ

ಬೆಂಗಳೂರು: ರೈತರಿಗೆ ಸಹಾಯ ಮಾಡುವ ಹಿತದೃಷ್ಟಿಯಿಂದ ಪ್ರಧಾನ್‌ ಮಂತ್ರಿ ಪ್ರಧಾನಮಂತ್ರಿ ಕುಸುಮ್‌ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್‌ ಚಾಲಿತ ಪಂಪ್‌ ಅಳವಡಿಕೆಗೆ ಹೊಸ ಟೆಂಡರ್‌ ಗಳನ್ನು ಬಿಡುಗಡೆಮಾಡಲಾಗಿದ್ದು.ಮೊಬೈಲ್‌ ಆ್ಯಪ್‌ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ.

Advertisement

ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಇಂಧನ ಇಲಾಖೆ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿʼ ಮೇಳದ ಉದ್ಘಾಟನೆ ಮುಖ್ಯಮಂತ್ರಿ ಅವರು ನೆರವೇರಿಸಿದರು ಅಲ್ಲದೇ , ‘ಕುಸುಮ್’ ಬಿ ಮತ್ತು ಸಿ ಯೋಜನೆ ಹಾಗೂ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆ ಗೊಳಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಇಂಧನ ಸಚಿವ ಭಾಗಿಯಾಗಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ ಉತ್ಪಾದನೆ ಹೆಚಿದಷ್ಟು ಒಳಿತು, ಆಗ ವಿದ್ಯುತ್‌ ಬೇಡಿಕೆಯನ್ನು ಪೂರೈಸುತ್ತೇವೆ ಅಲ್ಲದೆ ಬರುವ ದಿನಗಳಲ್ಲಿ ಅಂದರೆ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್​ ವಿದ್ಯುತ್ ಉತ್ಪಾದನೆ ಮಾಡುವುದಾಗಿ ಭರವಸೆ ನೀಡಿದರು. ಹಾಗೂ ರೈತರಿಗೆ 7 ಗಂಟೆಯ ವಿದ್ಯುತ್‌ ನ್ನು ನೀಡಲಾಗುವುದು ಮತ್ತು ಈ ಯೋಜನೆಯಡಿ 80% ರಷ್ಟು ಸಬ್ಸಿಡಿ ಕೂಡ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Advertisement

Advertisement
Tags :
Advertisement