ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಯೋಧ

ಅಸ್ಸಾಂ ರೈಫಲ್ಸ್ ಯೋಧನೊಬ್ಬ ತನ್ನೊಂದಿಗಿದ್ದ ಆರು ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ, ಬಳಿಕ ಮಣಿಪುರದಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡೇಟಿಗೆ ಒಳಗಾದ ಆರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
02:24 PM Jan 24, 2024 IST | Ashitha S

ಸ್ಸಾಂ: ಅಸ್ಸಾಂ ರೈಫಲ್ಸ್ ಯೋಧನೊಬ್ಬ ತನ್ನೊಂದಿಗಿದ್ದ ಆರು ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ, ಬಳಿಕ ಮಣಿಪುರದಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡೇಟಿಗೆ ಒಳಗಾದ ಆರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಈ ಘಟನೆ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಮಣಿಪುರದ ಮ್ಯಾನ್ಮಾರ್ ಗಡಿಯ ಬಳಿ ನಿಯೋಜಿಸಲಾದ ಅಸ್ಸಾಂ ರೈಫಲ್ಸ್ ಬೆಟಾಲಿಯನ್‌ನಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ

Advertisement

ಮಣಿಪುರದಲ್ಲಿ ಈಗಾಗಲೇ ಗಲಾಟೆ ನಡೆಯುತ್ತಿರುವ ಕಾರಣ ಈ ಘಟನೆಯ ಬಗ್ಗೆ ವದಂತಿ ಹಬ್ಬದಂತೆ ತಡೆಯಲು ಮತ್ತು ಸತ್ಯಾಂಶ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement
Tags :
GOVERNMENTindiaLatestNewsNewsKannadaಆತ್ಮಹತ್ಯೆನವದೆಹಲಿಯೋಧ
Advertisement
Next Article