ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಣ ಕೊಡಲಿಲ್ಲವೆಂದು ತಾಯಿಯನ್ನು ಕೊಂದ ಮಗ

ಹಣ ಕೊಡಲಿಲ್ಲವೆಂದು ತಾಯಿಯನ್ನು ಕೊಂದು ಉತ್ತರ ಪ್ರದೇಶದಿಂದ ಹರ್ಯಾಣದವರೆಗೆ ಸೂಟ್​ಕೇಸ್​ನಲ್ಲಿ ಹೊತ್ತೊಯ್ದ ಘಟನೆ ನಡೆದಿದೆ.
01:44 PM Dec 17, 2023 IST | Ashika S
ಹರ್ಯಾಣ: ಹಣ ಕೊಡಲಿಲ್ಲವೆಂದು ತಾಯಿಯನ್ನು ಕೊಂದು ಉತ್ತರ ಪ್ರದೇಶದಿಂದ ಹರ್ಯಾಣದವರೆಗೆ ಸೂಟ್​ಕೇಸ್​ನಲ್ಲಿ ಹೊತ್ತೊಯ್ದ ಘಟನೆ ನಡೆದಿದೆ.
ಹರ್ಯಾಣದ ಹಿಸಾರ್ ಜಿಲ್ಲೆಯ ನಿವಾಸಿ 21 ವರ್ಷದ ಯುವಕ ಹಿಮಾಂಶು ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಡಿಸೆಂಬರ್ 13 ರಂದು ತನ್ನ 42 ವರ್ಷದ ತಾಯಿ ಪ್ರತಿಮಾ ದೇವಿ ಬಳಿ 5 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ.
ಆದರೆ ಆಕೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಿರಾಕರಣೆಯಿಂದ ಕೋಪಗೊಂಡ ಹಿಮಾಂಶು ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ಹಿಮಾಂಶು ಪ್ರತಿಮಾ ದೇವಿಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ಸಂಗಮದಲ್ಲಿ ಶವವನ್ನು ತೇಲಿ ಬಿಡುವ ಉದ್ದೇಶದಿಂದ ಪ್ರಯಾಗ್‌ರಾಜ್‌ಗೆ ರೈಲನ್ನು ಹಿಡಿದಿದ್ದ.
ಸಂಗಮ್ ಪ್ರದೇಶದಲ್ಲಿ ನದಿಯ ಮುಂಭಾಗದಲ್ಲಿ ಗಸ್ತು ತಿರುಗುತ್ತಿದ್ದ ದಾರಗಂಜ್ ಪೊಲೀಸ್ ಠಾಣೆಯ ಪೊಲೀಸರು ಸೂಟ್‌ಕೇಸ್‌ನೊಂದಿಗೆ ಹಿಮಾಂಶು ಅವರ ಚಲನವಲನವನ್ನು ಅನುಮಾನಾಸ್ಪದವಾಗಿರುವುದನ್ನು ಕಂಡಿದ್ದಾರೆ.
ಪೊಲೀಸರು ಸೂಟ್‌ಕೇಸ್ ಅನ್ನು ಪರಿಶೀಲಿಸಿದಾಗ ಅದರೊಳಗೆ ದೇವಿ ಶವ ತುಂಬಿರುವುದು ಕಂಡುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಬಗ್ಗೆ ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯ ತಂದೆ ಮತ್ತು ಸಹೋದರಿಯರಿಗೂ ಮಾಹಿತಿ ನೀಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
Advertisement
Advertisement
Tags :
LatetsNewsNewsKannadaಉತ್ತರ ಪ್ರದೇಶತಾಯಿಸೂಟ್​ಕೇಸ್ಹಣ
Advertisement
Next Article