ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮದುವೆ ಮಾಡಿಸುತ್ತಿಲ್ಲ ಎಂದು ತಾಯಿಯನ್ನೇ ಕೊಂದ ಮಗ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೂಚಾವರಂನಲ್ಲಿ ಪುತ್ರನೊಬ್ಬ ತನಗೆ ಮದುವೆ ಮಾಡಿಸುತ್ತಿಲ್ಲ ಎಂದು ತಾಯಿಯನ್ನೇ ಕೊಂದು  ಹಾಕಿದ ಘಟನೆ ನಡೆದಿದೆ.
03:09 PM Feb 05, 2024 IST | Ashika S

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೂಚಾವರಂನಲ್ಲಿ ಪುತ್ರನೊಬ್ಬ ತನಗೆ ಮದುವೆ ಮಾಡಿಸುತ್ತಿಲ್ಲ ಎಂದು ತಾಯಿಯನ್ನೇ ಕೊಂದು  ಹಾಕಿದ ಘಟನೆ ನಡೆದಿದೆ.

Advertisement

ಅನಿಲ್‌ ಎಂಬಾತನೇ ತನ್ನ ತಾಯಿ ಶೋಭಾ (45) ಎಂಬವರನ್ನು ಕೊಲೆ ಮಾಡಿದ  ಮಗ.

ಅನಿಲ್‌ ಸುಮಾರು 25 ವರ್ಷದ ಯುವಕನಾಗಿದ್ದು ಕುಡಿತದ ದಾಸನಾಗಿದ್ದ. ಸರಿಯಾಗಿ ಕೆಲಸ ಮಾಡದೆ ತಾಯಿಯ ಕೈಯಿಂದಲೇ ಹಣವನ್ನು ಕಿತ್ತುಕೊಂಡು ಹೋಗಿ ಸರಾಯಿ ಸುರಿಯುತ್ತಿದ್ದ. ಈ ನಡುವೆ ತಾಯಿ ತನಗೆ ಮದುವೆ ಮಾಡಿಸುತ್ತಿಲ್ಲ ಎಂದು ಹಂಗಿಸುತ್ತಿದ್ದ.

Advertisement

ಭಾನುವಾರ ರಾತ್ರಿ ಇದೇ ವಿಚಾರದಲ್ಲಿ ತಾಯಿ ಮತ್ತು ಮಗನ ನಡುವೆ ಜಗಳವಾಗಿ, ಕುಡಿದ ನಶೆಯಲ್ಲಿ ತಾಯಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕುಂಚಾವರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಕೊಲೆ ಮಾಡಿದ ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.

Advertisement
Tags :
Late3stNewsNewsKannadaಕಲಬುರಗಿ ಜಿಲ್ಲೆತಾಯಿಮಗಮದುವೆ
Advertisement
Next Article