ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಾಲಿ ನಟನೆಯ‘ಕೋಟಿ’ ಸಿನಿಮಾ ಮೊದಲ ಹಾಡು ಬಿಡುಗಡೆ

ಡಾಲಿ ಧನಂಜಯ್‌ ನಟಿಸಿರುವ ‘ಕೋಟಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಮೊದಲ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ. ಮಧುರ ಗಾಯಕ ಅರ್ಮಾನ್ ಮಲ್ಲಿಕ್ ಹಾಡು ಹಾಡಿದ್ದಾರೆ
08:02 AM May 15, 2024 IST | Nisarga K
‘ಕೋಟಿ’ ಸಿನಿಮಾ ಮೊದಲ ಹಾಡು ಬಿಡುಗಡೆ

ಡಾಲಿ ಧನಂಜಯ್‌ ನಟಿಸಿರುವ ‘ಕೋಟಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಮೊದಲ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ. ಮಧುರ ಗಾಯಕ ಅರ್ಮಾನ್ ಮಲ್ಲಿಕ್ ಹಾಡು ಹಾಡಿದ್ದಾರೆ. ಸಾಹಿತ್ಯ ಬರೆದಿರುವುದು ಯೋಗರಾಜ್ ಭಟ್. ಹಾಡಿಗೆ ಸಂಗೀತವನ್ನು ವಾಸುಕಿ ವೈಭವ್ ಒದಗಿಸಿದ್ದಾರೆ. ವಾಸುಕಿ ವೈಭವ್ ಹಾಗೂ ಅರ್ಮಾಣ್ ಮಲ್ಲಿಕ್ ಜೋಡಿಯ ಮೊಟ್ಟ ಮೊದಲ ಹಾಡು ಇದಾಗಿದೆ.

Advertisement

ಹಾಡಿನ ಲಿರಿಕಲ್ ವಿಡಿಯೋ ಇದೀಗ ಬಿಡುಗಡೆ ಆಗಿದ್ದು, ಮಧುರವಾದ ಹಾಡು ಮನಮುಟ್ಟುವ ಜೊತೆಗೆ ದೃಶ್ಯಗಳು ಸಹ ಮನ ಸೆಳೆಯುವಂತೆ ಹಾಡನ್ನು ಚಿತ್ರೀಕರಣ ಮಾಡಿರುವುದು ತಿಳಿಯುತ್ತಿದೆ.

ಹಾಡು ಬಿಡುಗಡೆಗೆ ಮುನ್ನ ಮಾತನಾಡಿದ್ದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್, ‘‘ವಾಸುಕಿ ಭವನ್​ ಹೊಸ ತಲೆಮಾರಿನ ಪ್ರತಿಭಾವಂತ ಮ್ಯೂಸಿಕ್​ ಡೈರೆಕ್ಟರ್​. ಇನ್ನು, ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಫ್ಯಾನ್​ ನಾನು. ಯೋಗರಾಜ್​ ಭಟ್​ ಮತ್ತು ವಾಸುಕಿ ವೈಭವ್​ ಕಾಂಬಿನೇಷನ್​ನ ಈ ಗೀತೆಯನ್ನು ಅರ್ಮಾನ್ ಮಲಿಕ್ ಬಹಳ ಚೆನ್ನಾಗಿ ಹಾಡಿದ್ದಾರೆ. ಕನ್ನಡಿಗರಿಗೆ ಈ ಹಾಡು ಇಷ್ಟ ಆಗುವುದರಲ್ಲಿ ಅನುಮಾನವಿಲ್ಲ’ ಎಂದಿದ್ದರು.

Advertisement

Advertisement
Tags :
cinemaDALI DHANANJAYAkotiLatestNewsNewsKarnatakareleaseSANDLEWOODSONG
Advertisement
Next Article