For the best experience, open
https://m.newskannada.com
on your mobile browser.
Advertisement

ಶೂ ಕದ್ದವನಿಗೆ ಹೊಸ ಪಾದರಕ್ಷೆ ಕೊಡಿಸಿ; ಸ್ವಿಗ್ಗಿ ಬಾಯ್ ಬೆನ್ನಿಗೆ ನಿಂತ ಸೋನು ಸೂದ್

ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ನೀಡಿ ಹಿಂದಿರುಗುವ ಸಮಯದಲ್ಲಿ ಮನೆಯೊಂದರ ಮುಂದಿದ್ದ ದುಬಾರಿ ಶೂ ಕದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅವನ ಪರವಾಗಿ ಪೋಸ್ಟ್‌ ಹಾಕಿದ ನಟ ಸೋನು ಸೂದ್‌ರ ನಡೆ ಚರ್ಚೆಗೆ ಗ್ರಾಸವಾಗಿದೆ.
08:58 PM Apr 13, 2024 IST | Maithri S
ಶೂ ಕದ್ದವನಿಗೆ ಹೊಸ ಪಾದರಕ್ಷೆ ಕೊಡಿಸಿ  ಸ್ವಿಗ್ಗಿ ಬಾಯ್ ಬೆನ್ನಿಗೆ ನಿಂತ ಸೋನು ಸೂದ್

ಗುರುಗ್ರಾಮ್: ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ನೀಡಿ ಹಿಂದಿರುಗುವ ಸಮಯದಲ್ಲಿ ಮನೆಯೊಂದರ ಮುಂದಿದ್ದ ದುಬಾರಿ ಶೂ ಕದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅವನ ಪರವಾಗಿ ಪೋಸ್ಟ್‌ ಹಾಕಿದ ನಟ ಸೋನು ಸೂದ್‌ರ ನಡೆ ಚರ್ಚೆಗೆ ಗ್ರಾಸವಾಗಿದೆ.

Advertisement

ದಯೆಯಿಂದಿರಿ ಮತ್ತು ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದಿರುವ ಸೂದ್‌, ಶಿಕ್ಷಿಸುವ ಬದಲು ಅವನಿಗೆ ಹೊಸ ಜೋಡಿ ಶೂಗಳನ್ನು ನೀಡಿ ಎಂದು ಹೇಳಿದ್ದಾರೆ. ಇವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸೋನು ಸೂದ್‌ ಕಳ್ಳತನವನ್ನು ಬೆಂಬಲಿಸುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement
Advertisement
Tags :
Advertisement