For the best experience, open
https://m.newskannada.com
on your mobile browser.
Advertisement

ಸೋನು ಶ್ರೀನಿವಾಸ ಗೌಡಗೆ 14 ದಿನ ನ್ಯಾಯಾಂಗ ಬಂಧನ !

ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್‌ ಸೋನು ಗೌಡಗೆ ಇದೀಗ ಬೆಂಗಳೂರಿನ ಸಿಜೆಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
02:27 PM Mar 25, 2024 IST | Ashitha S
ಸೋನು ಶ್ರೀನಿವಾಸ ಗೌಡಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್‌ ಸೋನು ಗೌಡಗೆ ಇದೀಗ ಬೆಂಗಳೂರಿನ ಸಿಜೆಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

ಸೋನು ಶ್ರೀನಿವಾಸ್ ಗೌಡ ಅವರು ಟಿಕ್​ಟಾಕ್ ಹಾಗೂ ರೀಲ್ಸ್ ಮಾಡಿ ಫೇಮಸ್ ಆದವರು. ನಂತರ ಅವರ ಖಾಸಗಿ ವಿಡಿಯೋ ಲೀಕ್ ಆಗಿ ಸಾಕಷ್ಟು ಸುದ್ದಿ ಆಯಿತು. ನಂತರ ‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರಲ್ಲಿ ಸ್ಪರ್ಧಿ ಆಗಿ ಭಾಗಿ ಆಗಿದ್ದರು. ಈ ವೇಳೆ ಅವರ ಮೇಲೆ ಇದ್ದ ಅಭಿಪ್ರಾಯ ಕೆಲವರಿಗೆ ಬದಲಾಗಿತ್ತು. ಈಗ ಸೋನು ಶ್ರೀನಿವಾಸ ಗೌಡ ಅವರು ಕಾನೂನು ಬಾಹೀರವಾಗಿ ಮಗುವನ್ನು ದತ್ತು ಪಡೆದು ಸಂಕಷ್ಟ ಅನುಭವಿಸಿದ್ದಾರೆ.

ಸೋನು ಶ್ರೀನಿವಾಸ ಗೌಡ ಅವರು ಕಳೆದ ವಾರ ಅರೆಸ್ಟ್ ಆದರು. ಆ ಬಳಿಕ ಈ ಪ್ರಕರಣದಲ್ಲಿ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ನ್ಯಾಯಾಂಗ ಬಂಧನ ವಿಧಿಸಿ CJM ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

Advertisement
Tags :
Advertisement