For the best experience, open
https://m.newskannada.com
on your mobile browser.
Advertisement

ಸೋನು ಶ್ರೀನಿವಾಸ್​ ಗೌಡ 4 ದಿನ ​ಪೊಲೀಸ್​ ಕಸ್ಟಡಿಗೆ

ಸೋಶಿಯಲ್​ ಮೀಡಿಯಾ ಹಾಗೂ ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನು ಶ್ರೀನಿವಾಸ್​ ಗೌಡ ಅವರಿಗೆ ಈಗ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.
06:11 PM Mar 22, 2024 IST | Ashitha S
ಸೋನು ಶ್ರೀನಿವಾಸ್​ ಗೌಡ 4 ದಿನ ​ಪೊಲೀಸ್​ ಕಸ್ಟಡಿಗೆ

ಬೆಂಗಳೂರು: ಸೋಶಿಯಲ್​ ಮೀಡಿಯಾ ಹಾಗೂ ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನು ಶ್ರೀನಿವಾಸ್​ ಗೌಡ ಅವರಿಗೆ ಈಗ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.

Advertisement

ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಸಿಜೆಎಂ ಕೋರ್ಟ್ ಆದೇಶ ನೀಡಿದೆ. ಮಾರ್ಚ್ 25ರವರೆಗೆ ಸೋನು ಗೌಡ ಅವರು ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ.

ಕೋರ್ಟ್‌ಗೆ ಹಾಜರಾದ ಬಳಿಕ ಮೊದಲು ಪ್ರತಿಕ್ರಿಯೆ ನೀಡಿದ ಸೋನು ಗೌಡ ಅವರು ಕಾನೂನಿನ ಮೂಲಕವೇ ತನಿಖೆ ನಡೆಯುತ್ತಿದೆ. ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲ. ಒಂದು ಹುಡುಗಿಯನ್ನ ರಕ್ಷಿಸಲು ಕರೆದುಕೊಂಡು ಬಂದಿದ್ದೆ. ಆ ಹುಡುಗಿ ಸೇಫ್ ಆಗಿದ್ದಾಳೆ ಆರಾಮಾಗಿದ್ದಾಳೆ ಎಂದು ಹೇಳಿದ್ದಾರೆ.

Advertisement

Advertisement
Tags :
Advertisement