ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್‌ ಕೊಲೆ: ನಾಲ್ವರು ಅಪರಾಧಿಗಳಿಗೆ ಜಾಮೀನು !

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್‌ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್‌ ಇಂದು ಜಾಮೀನು ಮಂಜೂರು ಮಾಡಿದೆ. ಅಪರಾಧಿಗಳಾದ ರವಿಕಪೂರ್‌, ಅಮಿತ್‌ ಶುಕ್ಲಾ, ಬಲ್ಜೀತ್‌ ಮಲಿಕ್ ಮತ್ತು ಅಜಯ್‌ ಕುಮಾರ್‌ ಅವರಿಗೆ ನ್ಯಾಯಮೂರ್ತಿಗಳಾದ ಸುರೇಶ್‌ ಕುಮಾರ್‌ ಕೈತ್‌ ಮತ್ತು ಗಿರೀಶ್‌ ಕಠ್ಪಾಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ನೀಡಿದೆ.
07:37 PM Feb 12, 2024 IST | Ashitha S

ನವದೆಹಲಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್‌ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್‌ ಇಂದು ಜಾಮೀನು ಮಂಜೂರು ಮಾಡಿದೆ. ಅಪರಾಧಿಗಳಾದ ರವಿಕಪೂರ್‌, ಅಮಿತ್‌ ಶುಕ್ಲಾ, ಬಲ್ಜೀತ್‌ ಮಲಿಕ್ ಮತ್ತು ಅಜಯ್‌ ಕುಮಾರ್‌ ಅವರಿಗೆ ನ್ಯಾಯಮೂರ್ತಿಗಳಾದ ಸುರೇಶ್‌ ಕುಮಾರ್‌ ಕೈತ್‌ ಮತ್ತು ಗಿರೀಶ್‌ ಕಠ್ಪಾಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ನೀಡಿದೆ.

Advertisement

ತಮ್ಮ ವಿರುದ್ಧದ ದೋಷಾರೋಪವನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಬಾಕಿ ಇರುವವರೆಗೆ ಶಿಕ್ಷೆಯನ್ನು ಹೈಕೋರ್ಟ್‌ ಅಮಾನತುಗೊಳಿಸಿದೆ. ಅಪರಾಧಿಗಳು 14 ವರ್ಷಗಳಿಂದ ಕಸ್ಟಡಿಯಲ್ಲಿರುವುದನ್ನು ವಿಚಾರಣೆ ವೇಳೆ ನ್ಯಾಯಪೀಠ ಉಲ್ಲೇಖಿಸಿದೆ.

ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಜನವರಿ 23ರಂದು ದೆಹಲಿ ಪೊಲೀಸರಿಗೆ ಸೂಚಿಸಿತ್ತು.

Advertisement

ಇಂಗ್ಲಿಷ್‌ ಸುದ್ದಿವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೌಮ್ಯಾ ಅವರನ್ನು 2008 ಸೆಪ್ಟೆಂಬರ್‌ 30 ರಂದು ದಕ್ಷಿಣ ದೆಹಲಿಯ ನೆಲ್ಸನ್‌ ಮಂಡೇಲಾ ಮಾರ್ಗ್‌ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಸೌಮ್ಯಾ ಅವರು ಕೆಲಸ ಮುಗಿಸಿ ಕಾರಿನಲ್ಲಿ ಮರಳುತ್ತಿದ್ದಾಗ ಈ ಕೃತ್ಯ ಎಸಗಲಾಗಿತ್ತು.

Advertisement
Tags :
convictsDELHI HIGH COURTGOVERNMENTindiajournalist SoumyaLatestNewsNewsKannadaನವದೆಹಲಿ
Advertisement
Next Article