For the best experience, open
https://m.newskannada.com
on your mobile browser.
Advertisement

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, 2,28,763 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಆದರೆ ಫೇಲ್​ ಆದ ವಿದ್ಯಾರ್ಥಿಗಳು ಟೆನ್ಶನ್​ ಮಾಡುವ ಅವಶ್ಯಕೆಯಿಲ್ಲ. ಮರು ಪರೀಕ್ಷೆ ಬರೆಯುವ ಮೂಲಕ ಪಾಸ್​ ಮಾಡಬಹುದಾಗಿದೆ.
12:44 PM May 09, 2024 IST | Ashitha S
ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ  ಮರು ಪರೀಕ್ಷೆಯ ದಿನಾಂಕ ಪ್ರಕಟ

ಬೆಂಗಳೂರು: ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, 2,28,763 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಆದರೆ ಫೇಲ್​ ಆದ ವಿದ್ಯಾರ್ಥಿಗಳು ಟೆನ್ಶನ್​ ಮಾಡುವ ಅವಶ್ಯಕೆಯಿಲ್ಲ. ಮರು ಪರೀಕ್ಷೆ ಬರೆಯುವ ಮೂಲಕ ಪಾಸ್​ ಮಾಡಬಹುದಾಗಿದೆ.

Advertisement

ಫೇಲ್‌ ಆದ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ಮರು ಪರೀಕ್ಷೆ ಮಾಡುತ್ತಿದೆ.  ಆ ಮೂಲಕ ಅನುತ್ತೀರ್ಣಗೊಂಡ ವಿಷಯವನ್ನು ಓದಿ ಪಾಸ್​ ಮಾಡಬಹುದಾಗಿದೆ.​

ಇಲಾಖೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶದ ಬೆನ್ನಲ್ಲೇ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ. ಜೂನ್ 07 ರಿಂದ ಪರೀಕ್ಷೆ- 2 ಆರಂಭಗೊಳ್ಳಲಿದೆ. ಜೂನ್ 07 ಶುಕ್ರವಾರ ಪ್ರಥಮ ಮತ್ತು ತೃತೀಯ ಭಾಷೆ, ಜೂನ್ 8 ಶನಿವಾರ: NSQF( ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ ಇತರೆ), ಜೂನ್ 10 ಸೋಮವಾರ: ಕೋರ್ ಸಬ್ಜೆಕ್ಟ್ (ಗಣಿತ, ಸಮಾಜ ವಿಜ್ಞಾನ), ಜೂನ್ 11 ಮಂಗಳವಾರ: ಅರ್ಥಶಾಸ್ತ್ರ, ಜೂನ್ 12 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ, ಜೂನ್ 13 ಗುರುವಾರ: ದ್ವಿತೀಯ ಭಾಷೆ (ಕನ್ನಡ, ಇಂಗ್ಲಿಷ್), ಜೂನ್ 14 ಶುಕ್ರವಾರ: ಸಮಾಜಶಾಸ್ತ್ರ ಪರೀಕ್ಷೆ ಬರೆಯಬಹುದು.

Advertisement

Advertisement
Tags :
Advertisement