ಕರ್ನಾಟಕ1 | ಬೆಂಗಳೂರು-ಮೈಸೂರು-ಮಲೆನಾಡು-ಬೆಳಗಾವಿ-ಕರಾವಳಿ-ಕಲಬುರಗಿ-
ಹೊರನಾಡ ಕನ್ನಡಿಗರು1
ದೇಶ-ವಿದೇಶ-1 | ದೇಶ-1
ವಿಶೇಷ-
ವಿಜ್ಞಾನ/ತಂತ್ರಜ್ಞಾನ | ಸಾಂಡಲ್ ವುಡ್
ಮನರಂಜನೆ-ಕ್ರೀಡೆ-1ಕ್ಯಾಂಪಸ್-1
ಇತರೆ- | ಆರೋಗ್ಯ-ಅಡುಗೆ ಮನೆ-ಸಮುದಾಯ-ಕ್ರೈಮ್-ಶಿಕ್ಷಣ-ವಿಡಿಯೊ-ಪಾಡ್‌ಕಾಸ್ಟ್‌-ಉದ್ಯೋಗ-
Advertisement

ಎಸ್‌ಎಸ್ಎ‌ಲ್‌ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ : ಆನ್‌ಲೈನ್‌ನಲ್ಲಿ ಫಲಿತಾಂಶ ಹೀಗೆ ನೋಡಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2024ರ ಎಸ್​​ಎಸ್​ಎಲ್​​ಸಿ (SSLC) ಪರೀಕ್ಷೆ-02 ಫಲಿತಾಂಶ ಇಂದು 11.30ಗೆ ಈಗಾಗಲೇ ಪ್ರಕಟಗೊಂಡಿದೆ.ಕೆಎಸ್​ಆರ್​ಇಬಿಯ ಅಧಿಕೃತ ವೆಬ್​ ಸೈಟ್
12:53 PM Jul 10, 2024 IST | Nisarga K
ಎಸ್‌ಎಸ್ಎ‌ಲ್‌ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ : ಆನ್‌ಲೈನ್‌ನಲ್ಲಿ ಫಲಿತಾಂಶ ಹೀಗೆ ನೋಡಿ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2024ರ ಎಸ್​​ಎಸ್​ಎಲ್​​ಸಿ (SSLC) ಪರೀಕ್ಷೆ-02 ಫಲಿತಾಂಶ ಇಂದು 11.30ಗೆ ಈಗಾಗಲೇ ಪ್ರಕಟಗೊಂಡಿದೆ.ಕೆಎಸ್​ಆರ್​ಇಬಿಯ ಅಧಿಕೃತ ವೆಬ್​ ಸೈಟ್​​ https://karresults.nic.in ನಲ್ಲಿ ಫಲಿತಾಂಶ ನೋಡಬಹುದಾಗಿದೆ.

Advertisement

ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಮತ್ತು ಫಲಿತಾಂಶ ಪಟ್ಟಿ ಡೌನ್​ಲೋಡ್​ ಮಾಡಲು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಕೆಎಸ್​ಇಎಬಿ ಅಧಿಕೃತ ವೆಬ್​​ಸೈಟ್​ kseab.karnataka.gov.in ಅಥವಾ karresults.nic.inಗೆ ಭೇಟಿ ನೀಡಿ.

ರಾಜ್ಯದ 724 ಪರೀಕ್ಷಾ ಕೇಂದ್ರಗಳಲ್ಲಿ ಜೂನ್​ 14 ರಿಂದ 21ರವರಗೆ ಎಸ್​ಎಸ್​ಎಲ್​ಸಿ ಪರೀಕ್ಷೆ-02 ನಡೆದವು. ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.ಸುಮಾರು 13,085 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಎರಡನೇ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಥವಾ ಇನ್ನೂ ಹೆಚ್ಚಿನ ಅಂಕಗಳನ್ನು ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

Advertisement

ಫಲಿತಾಂಶ ಪರಿಶೀಲಿಸುವುದು ಹೇಗೆ
ಹಂತ 1: kseab.karnataka.gov.in ಅಥವಾ karresults.nic.inನಲ್ಲಿ ಕೆಎಸ್​ಇಎಬಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಲಿಂಕ್​ ಅನ್ನು ಕ್ಲಿಕ್​ ಮಾಡಿ.
ಹಂತ 3: ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಹಂತ 4: Submit ಬಟನ್​ ಮೇಲೆ ಕ್ಲಿಕ್​ ಮಾಡಿ
ಹಂತ 5: ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣುತ್ತದೆ.
ಹಂತ 6: ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಡೌನ್​ಲೋಡ್​ ಮಾಡಿ ಮತ್ತು ಪ್ರಿಂಟ್​ಔಟ್​ ಅನ್ನು ತೆಗೆದುಕೊಳ್ಳಿ

Advertisement
Tags :
examLATEST NEWSNews KarnatakaonlineResultSSLCstudents
Advertisement
Next Article