For the best experience, open
https://m.newskannada.com
on your mobile browser.
Advertisement

ಎಸ್.ಎಸ್.ಎಲ್.ಸಿ ಪರೀಕ್ಷೆ: ಕೊಂಕಣಿಯಲ್ಲಿ ಆರು ವಿದ್ಯಾರ್ಥಿಗಳಿಗೆ 100% ಅಂಕ

ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕೊಂಕಣಿ ಶಿಕ್ಷಕರ ನೇಮಕಾತಿಯಾದ ಹತ್ತು ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿನ ಒಟ್ಟು ಆರು ವಿದ್ಯಾರ್ಥಿಗಳು ಈ ಬಾರಿಯ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಕೊಂಕಣಿ ತೃತೀಯ ಭಾಷೆಯಲ್ಲಿ 100 % ಅಂಕಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
03:56 PM May 15, 2024 IST | Ashitha S
ಎಸ್ ಎಸ್ ಎಲ್ ಸಿ ಪರೀಕ್ಷೆ  ಕೊಂಕಣಿಯಲ್ಲಿ ಆರು ವಿದ್ಯಾರ್ಥಿಗಳಿಗೆ 100  ಅಂಕ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕೊಂಕಣಿ ಶಿಕ್ಷಕರ ನೇಮಕಾತಿಯಾದ ಹತ್ತು ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿನ ಒಟ್ಟು ಆರು ವಿದ್ಯಾರ್ಥಿಗಳು ಈ ಬಾರಿಯ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಕೊಂಕಣಿ ತೃತೀಯ ಭಾಷೆಯಲ್ಲಿ 100 % ಅಂಕಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

Advertisement

ಕಳೆದ ಸಾಲಿನಲ್ಲಿ ಕೊಂಕಣಿ ಶಿಕ್ಷಣದ ಇತಿಹಾಸದಲ್ಲೇ ಮೊತ್ತ ಮೊದಲಿಗೆ ಮಂಗಳೂರಿನ ನಲಂದಾ ಆಂಗ್ಲ ಮಾಧ್ಯಮ ಶಾಲೆಯ ಪೂರ್ಣಿಮಾ ಪ್ರಭು 100 % ಅಂಕ ಪಡೆದಿದ್ದರು.

ಈ ಬಾರಿ ನೂರು ಶೇಕಡಾ ಪಡೆದ ಆರೂ ವಿದ್ಯಾರ್ಥಿಗಳಿಗೆ ತಲಾ ರೂ. 3000/- ವಿದ್ಯಾರ್ಥಿ ವೇತನವನ್ನು ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ನೀಡಿ ಸನ್ಮಾನಿಸಲಾಗುವುದು. ರಾಜ್ಯದಲ್ಲಿ ಕಳೆದ ಹನ್ನೆರಡು ವರುಷಗಳಲ್ಲಿ 4000 ವಿದ್ಯಾರ್ಥಿಗಳು ದೇವನಾಗರಿ ಲಿಪಿಯಲ್ಲಿ ಕೊಂಕಣಿ ಶಿಕ್ಷಣ ಪಡೆದಿದ್ದಾರೆಂದು ಕೇಂದ್ರದ ಕೊಂಕಣಿ ಶಿಕ್ಷಣ ವಿಭಾಗದ ಮುಖ್ಯಸ್ತರೂ ವಿಶ್ವಸ್ಥರೂ ಆದ ಡಾ. ಕಸ್ತೂರಿ ಮೋಹನ್ ಪೈ ಹಾಗೂ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈಯವರು ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

Advertisement

Advertisement
Tags :
Advertisement