ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ  'ಸಂಪ್ರತಿ 2024' ರಾಷ್ಟ್ರೀಯ ವಿಚಾರ ಸಂಕಿರಣ

ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸೋಶಿಯಲ್ ವರ್ಕ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದವರು 'ಭಾರತದಲ್ಲಿ ಪರಿಸರ ನ್ಯಾಯ: ಸಮಸ್ಯೆಗಳು, ಸವಾಲುಗಳು ಮತ್ತು ಭವಿಷ್ಯ' ಎಂಬ ವಿಷಯದ ಕುರಿತು 'ಸಂಪ್ರತಿ 2024' ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು 6ನೇ ಫೆಬ್ರವರಿ 2024 ರಂದು ಎರಿಕ್ ಮಥಾಯಸ್ ಹಾಲ್‍ನಲ್ಲಿ ಆಯೋಜಿಸಿತ್ತು.
07:30 PM Feb 07, 2024 IST | Ashitha S

ಮಂಗಳೂರು: ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸೋಶಿಯಲ್ ವರ್ಕ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದವರು 'ಭಾರತದಲ್ಲಿ ಪರಿಸರ ನ್ಯಾಯ: ಸಮಸ್ಯೆಗಳು, ಸವಾಲುಗಳು ಮತ್ತು ಭವಿಷ್ಯ' ಎಂಬ ವಿಷಯದ ಕುರಿತು 'ಸಂಪ್ರತಿ 2024' ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು 6ನೇ ಫೆಬ್ರವರಿ 2024 ರಂದು ಎರಿಕ್ ಮಥಾಯಸ್ ಹಾಲ್‍ನಲ್ಲಿ ಆಯೋಜಿಸಿತ್ತು.

Advertisement

ಶ್ರೀ ರಾಜೇಂದ್ರ ಕಲ್ಬಾವಿ, ಕಾರ್ಯನಿರ್ವಾಹಕ ನಿರ್ದೇಶಕರು, ನಿರ್ಮಿತಿ ಕೇಂದ್ರ, ಮಂಗಳೂರು ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಉಪಕುಲಪತಿಗಳಾದ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ರವರು ವಹಿಸಿದ್ದರು. ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕರಾದ ಡಾ ಅಲ್ವಿನ್ ಡೇಸಾ, ಮಾಫೇ ಬ್ಲಾಕ್‌ನ ನಿರ್ದೇಶಕಿ ಡಾ ಲೊವೀನಾ ಲೋಬೊ, ಪಿಜಿ ಸೋಶಿಯಲ್ ವರ್ಕ್‌ ವಿಭಾಗ ಮುಖ್ಯಸ್ಥೆ ಡಾ ಶ್ವೇತಾ ರಸ್ಕ್ವಿನ್ಹಾ ಮತ್ತು ಸಂಪ್ರತಿ 2024 ರ ವಿದ್ಯಾರ್ಥಿ ಸಂಯೋಜಕ ಅಲ್ಡಿನ್ ಡಿಸೋಜಾ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಅಧ್ಯಕ್ಷರಾದ ವಂದನೀಯ ಡಾ.ಪ್ರವೀಣ್ ಮಾರ್ಟಿಸ್ ರವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ವಿಚಾರ ಸಂಕಿರಣಕ್ಕೆ ಅತ್ಯಂತ ಸೂಕ್ತವಾದ ವಿಷಯವನ್ನು ಆಯ್ಕೆ ಮಾಡಿದ ಸಂಘಟಕರನ್ನು ಅಭಿನಂದಿಸಿದರು. ಕ್ಯಾಂಪಸ್ ಅನ್ನು ಹಸಿರು ಮತ್ತು ಸ್ವಚ್ಛವಾಗಿ ಮಾಡುವಲ್ಲಿ ಕಾಲೇಜಿನ ಇಕೋ ವಾರಿಯರ್ಸ್‍್ನ ಸದಸ್ಯರು ಮಾಡಿದ ಅತ್ಯುತ್ತಮ ಕಾರ್ಯವನ್ನು ಅವರು ಶ್ಲಾಘಿಸಿದರು. ಮಾನವನ ಮಾನಸಿಕ ಪರಿಣಾಮಗಳಿಗೆ ಕಾರಣವಾಗುವ ನಕಾರಾತ್ಮಕ ಪರಿಸರದ ಪರಿಣಾಮಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯತ್ತ ತಮ್ಮ ಮನಸ್ಥಿತಿಯನ್ನು ಬದಲಾಯಿಸಲು ಪರಿಸರದ ಬಗ್ಗೆ ಕಲಿಯುವ ಪರಿಕಲ್ಪನೆಯು ಮೂಲಭೂತ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು. ‘ನಾನು ಪರಿಸರವನ್ನು ಸ್ವಚ್ಛವಾಗಿಡಬಲ್ಲೆ’ ಎಂಬ ಪ್ರತಿಜ್ಞೆ ಸ್ವೀಕರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಮುಖ್ಯ ಅತಿಥಿ ಶ್ರೀ ರಾಜೇಂದ್ರ ಕಲ್ಬಾವಿ ಮಾತನಾಡಿ, ಪರಿಸರವನ್ನು ಹೊಗಳಿ ಆರಾಧಿಸಬೇಕು ಎಂದರು. ಪರಿಸರದ ಅನೇಕ ಸಮಸ್ಯೆಗಳು ಮತ್ತು ಸುಸ್ಥಿರ ಅಭಿವೃದ್ಧಿಯ ನಿರೀಕ್ಷೆಗಳ ಕುರಿತು ಮಾತನಾಡಿದರು. ಮಳೆ ನೀರು ಕೊಯ್ಲು ಮತ್ತು ಜಲಮೂಲಗಳ ಸಂರಕ್ಷಣೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ನೀರು ಉಳಿಸಲು ಹಾಗೂ ಪರಿಸರ ಉಳಿಸಲು ಪ್ರತಿ ಮನೆ ರೀಚಾರ್ಜ್ ಪಿಟ್ ಮಾಡಬೇಕು ಎಂದು ಸಲಹೆ ನೀಡಿದರು. ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆಯ ಚೀಲಗಳನ್ನು ಉಪಯೋಗಿಸುವಂತೆ ಹೇಳಿದರು. ನಾವೆಲ್ಲರೂ ಜೊತೆಗೂಡಿ ಪರಿಸರದ ಮೇಲೆ ಬದಲಾವಣೆಯನ್ನು ತರಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ 3 ಪ್ಯಾನೆಲ್ ಚರ್ಚೆಗಳು ನಡೆದವು. ಬೆಂಗಳೂರಿನ ಕ್ರಿಸ್ತು ಜಯಂತಿ (ಸ್ವಾಯತ್ತ) ಕಾಲೇಜಿನ  ಮಾಧ್ಯಮ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಎಬಿ ಆಗಸ್ಟಿನ್ ಅವರು ಪರಿಸರ ನ್ಯಾಯಕ್ಕಾಗಿ ಮಾಧ್ಯಮ ನೇತೃತ್ವದ ಉಪಕ್ರಮಗಳ ಕುರಿತು ಮಾತನಾಡಿದರು; ಪರಿಸರ ನ್ಯಾಯದ ಕಡೆಗೆ ಸ್ವಯಂಸೇವಾ ಸಂಸ್ಥೆಯ ಧೋರಣೆ ಕುರಿತು ಉಡುಪಿಯ ಬೇರು ಪರಿಸರ ಸೇವೆಗಳ ಸಂಸ್ಥಾಪಕಿ ಮತ್ತು ಸಿಇಒ ದಿವ್ಯಾ ಹೆಗ್ಡೆ ಮತ್ತು ಬೆಂಗಳೂರಿನ ಕಾರ್ಪೊರೇಟ್ ಸಂವಹನ, ಸಿಎಸ್‌ಆರ್ ಮತ್ತು ಸುಸ್ಥಿರತೆಯ ನಿರ್ದೇಶಕಿ ಮತ್ತು ಮುಖ್ಯಸ್ಥೆ ದೀಪಾ ಶಶಿಧರನ್, ಪರಿಸರ ಸಾಮಾಜಿಕ ನ್ಯಾಯ ಮತ್ತು ಪರಿಸರದ ಕುರಿತು ಮಾತನಾಡಿದರು.

ಸಂಜೆ 4.15ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಿತು. ತೆಲಂಗಾಣ ಮತ್ತು ಆಂಧ್ರಪ್ರದೇಶದ ಹೈಕೋರ್ಟ್‌ನ ವಕೀಲೆ ಮತ್ತು ಪ್ರಜಾ ವುದ್ಯುಮಾಲ ಸಂಗೀತಭಾವ ಸಮಿತಿಯ ರಾಷ್ಟ್ರೀಯ ಸಂಚಾಲಕಿ ಶ್ರೀಮತಿ ಹೇಮಲಲಿತಾ ಮುಖ್ಯ ಅತಿಥಿಯಾಗಿದ್ದರು. ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಭಾರ ಹಣಕಾಸು ಅಧಿಕಾರಿ ರೆ.ಫಾ ವಿನ್ಸೆಂಟ್ ಪಿಂಟೋ, ಎಸ್‌ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Advertisement
Tags :
ಅಲೋಶಿಯಸ್
Advertisement
Next Article