For the best experience, open
https://m.newskannada.com
on your mobile browser.
Advertisement

ವಿಶೇಷ ಚೇತನ ವಿದ್ಯಾರ್ಥಿಗೆ ಥಳಿಸಿದ ಶಾಲಾ ಸಿಬ್ಬಂದಿ: ವಿಡಿಯೋ ವೈರಲ್‌

ಸ್ಕೂಲ್​​ ಬಸ್ಸಿನಲ್ಲಿ ವಿಶೇಷ ಚೇತನ ಮಗುವಿಗೆ ಶಾಲಾ ಸಿಬ್ಬಂದಿ ಮನ ಬಂದಂತೆ ಥಳಿಸಿರುವ ಘಟನೆ ಅಮೆರಿಕದ ಡೆನ್ವರ್‌ನಲ್ಲಿ ನಡೆದಿದೆ.
10:57 AM Apr 12, 2024 IST | Ashitha S
ವಿಶೇಷ ಚೇತನ ವಿದ್ಯಾರ್ಥಿಗೆ ಥಳಿಸಿದ ಶಾಲಾ ಸಿಬ್ಬಂದಿ  ವಿಡಿಯೋ ವೈರಲ್‌

ಅಮೆರಿಕ: ಸ್ಕೂಲ್​​ ಬಸ್ಸಿನಲ್ಲಿ ವಿಶೇಷ ಚೇತನ ಮಗುವಿಗೆ ಶಾಲಾ ಸಿಬ್ಬಂದಿ ಮನ ಬಂದಂತೆ ಥಳಿಸಿರುವ ಘಟನೆ ಅಮೆರಿಕದ ಡೆನ್ವರ್‌ನಲ್ಲಿ ನಡೆದಿದೆ.

Advertisement

ಡೆನ್ವರ್‌ ಪಬ್ಲಿಕ್ ಸ್ಕೂಲ್‌ನ ಸಿಬ್ಬಂದಿ ಕಿಯಾರಾ ಜೋನ್ಸ್ ಎಂಬ ಮಹಿಳೆ ಮಗುವಿಗೆ ಥಳಿಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಬಸ್​​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

@RokerGlasses ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆ ವಿದ್ಯಾರ್ಥಿಗೆ ಥಳಿಸುತ್ತಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ‘ಮಹಿಳೆಗೆ ಕಠಿಣ ಶಿಕ್ಷೆಯನ್ನು ನೀಡಬೇಕು’ ಎಂದು ಸಾಕಷ್ಟು ನೆಟ್ಟಿಗರು ಆಗ್ರಹಿಸಿದ್ದಾರೆ.

Advertisement

Advertisement
Tags :
Advertisement