ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೇನಾ ನೇಮಕಾತಿ ವೇಳೆ ಕಾಲ್ತುಳಿತ: 30ಮಂದಿ ಸಾವು !

ಕಾಂಗೋ: ಸೇನಾ ನೇಮಕಾತಿ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಸುಮಾರು 30ಮಂದಿ ಸಾವನ್ನಪ್ಪಿದ್ದು, 140ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆಯೊಂದು ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಬ್ರ್ಯಾಝಾವಿಲ್ಲೆಯ ಕ್ರೀಡಾಂಗಣದಲ್ಲಿ ನಡೆದಿದೆ.
11:11 AM Nov 22, 2023 IST | Ashitha S

ಕಾಂಗೋ: ಸೇನಾ ನೇಮಕಾತಿ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಸುಮಾರು 30ಮಂದಿ ಸಾವನ್ನಪ್ಪಿದ್ದು, 140ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆಯೊಂದು ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಬ್ರ್ಯಾಝಾವಿಲ್ಲೆಯ ಕ್ರೀಡಾಂಗಣದಲ್ಲಿ ನಡೆದಿದೆ.

Advertisement

ನ.14ರಿಂದ ಸೇನಾ ನೇಮಕಾತಿ ಆಂದೋಲನ ನಡೆಯುತ್ತಿದ್ದ ಒರ್ನಾನೊ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಈ ದುರಂತ ನಡೆದಿದೆ. ಸರ್ಕಾರದ ಪ್ರಕಾರ, ನೇಮಕಾತಿ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಸತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಯಿತು.

ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಉದ್ಯೋಗ ನೀಡುವ ಕೆಲವೇ ಸಂಸ್ಥೆಗಳಲ್ಲಿ ಒಂದಾದ ಸೇನೆಗೆ ಸೇರಲು ಸಾಲುಗಟ್ಟಿ ನಿಂತಿದ್ದ 18ರಿಂದ 25 ವರ್ಷ ವಯಸ್ಸಿನ ಉತ್ಸಾಹಿ ಯುವಕರಿಂದ ಕಾಲ್ತುಳಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಒರ್ನಾನೊ ಕ್ರೀಡಾಂಗಣದಲ್ಲಿ ಸಾಲುಗಟ್ಟಿ ನಿಂತಿದ್ದ ಕೆಲವರು ತಾಳ್ಮೆ ಕಳೆದುಕೊಂಡು ಬಲವಂತವಾಗಿ ನುಗ್ಗಾಡಿದ ಪರಿಣಾಮ ದುರಂತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

Advertisement

 

Advertisement
Tags :
congoindiaLatestNewsNewsKannadaRepublicStampedeಕಾಲ್ತುಳಿತನವದೆಹಲಿಸೇನಾ ನೇಮಕಾತಿ
Advertisement
Next Article