For the best experience, open
https://m.newskannada.com
on your mobile browser.
Advertisement

ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟ​ ವಿಲ್ ಜಾಕ್ಸ್​​

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್​ ಶಾಕ್​ ಕಾದಿದೆ. ಪ್ಲೇ ಆಫ್​​ ರೇಸ್​ನಲ್ಲಿರೋ ಆರ್​​ಸಿಬಿ ತಂಡಕ್ಕೆ ಇಂಗ್ಲೆಂಡ್​ ಆಟಗಾರರು ಆಘಾತ ನೀಡಿದ್ದಾರೆ. ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟು ದೇಶಕ್ಕಾಗಿ ಆಡಲು ವಿಲ್ ಜಾಕ್ಸ್​​ ಹಾಗೂ ರೀಸ್ ಟೋಪ್ಲಿ ಇಂಗ್ಲೆಂಡ್​ಗೆ ತೆರಳಿದ್ದಾರೆ.
08:09 PM May 14, 2024 IST | Ashitha S
ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟ​ ವಿಲ್ ಜಾಕ್ಸ್​​

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್​ ಶಾಕ್​ ಕಾದಿದೆ. ಪ್ಲೇ ಆಫ್​​ ರೇಸ್​ನಲ್ಲಿರೋ ಆರ್​​ಸಿಬಿ ತಂಡಕ್ಕೆ ಇಂಗ್ಲೆಂಡ್​ ಆಟಗಾರರು ಆಘಾತ ನೀಡಿದ್ದಾರೆ.

Advertisement

ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟು ದೇಶಕ್ಕಾಗಿ ಆಡಲು ವಿಲ್ ಜಾಕ್ಸ್​​ ಹಾಗೂ ರೀಸ್ ಟೋಪ್ಲಿ ಇಂಗ್ಲೆಂಡ್​ಗೆ ತೆರಳಿದ್ದಾರೆ.

ಕಳೆದ 8 ಪಂದ್ಯಗಳಲ್ಲಿ ಆರ್​​​ಸಿಬಿ ತಂಡದ ಪ್ಲೇಯಿಂಗ್​​ ಎಲೆವೆನ್​​ ಭಾಗವಾಗಿ ವಿಲ್​ ಜಾಕ್ಸ್​​ ಇದ್ದರು. ಆರ್​​​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ಸ್ಟಾರ್​ ಆಲ್​ರೌಂಡರ್​​ ವಹಿಸಿದ್ದರು. ಈಗ ವಿಲ್​ ಜಾಕ್ಸ್​​ ಅಲಭ್ಯತೆ ಆರ್​​​ಸಿಬಿ ತಂಡದ ಮೇಲೆ ಪ್ರಭಾವ ಬೀರಲಿದ್ದು, ಇವರ ಬದಲಿಗೆ ಯಾರನ್ನು ಕಣಕ್ಕಿಳಿಸಬಹುದು ಎಂಬ ಪ್ರಶ್ನೆ ಕಾಡುತ್ತಿದೆ.

Advertisement

ಈ ಪ್ರಶ್ನೆಗೆ ಸದ್ಯದ ಉತ್ತರ ಗ್ಲೆನ್ ಮ್ಯಾಕ್ಸ್​ವೆಲ್. ಕಳಪೆ ಫಾರ್ಮ್​ನಲ್ಲಿರೋ ಕಾರಣ ಮ್ಯಾಕ್ಸ್​ವೆಲ್ ಕಳೆದ ಕೆಲವು ಪಂದ್ಯಗಳಲ್ಲಿ ಆರ್​​ಸಿಬಿ ಪರ ಆಡಲಿಲ್ಲ. ಈಗ ಜಾಕ್ಸ್​ ಅಲಭ್ಯರಾದ ಪರಿಣಾಮ ಮ್ಯಾಕ್ಸ್​ವೆಲ್ ಅವರನ್ನೇ ಆರ್​​ಸಿಬಿಗೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವಿರುದ್ಧ ಮ್ಯಾಕ್ಸಿ ಕಣಕ್ಕಿಳಿಯಲಿದ್ದಾರೆ .

Advertisement
Tags :
Advertisement