ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಕಳ್ಳತನ ಮಾಡುತಿದ್ದ ವ್ಯಕ್ತಿಯ ಬಂಧನ

 ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ತನಗೆ ವಯಸ್ಸಾಗಿದೆ, ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆದು. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
07:41 AM Feb 19, 2024 IST | Ashika S

ಬೆಂಗಳೂರು:  ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ತನಗೆ ವಯಸ್ಸಾಗಿದೆ, ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆದು. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬೆಂಗಳೂರಿನ ಬನಶಂಕರಿ ನಿವಾಸಿ ಎಂ.ಎಸ್.ರವಿಕುಮಾರ್ ಬಂಧಿತ ಆರೋಪಿ.  ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ಹಣ ಕದಿಯುತ್ತಿದ್ದ.

ಆರೋಪಿ ರವಿಕುಮಾರ್, ಕಳೆದ ವರ್ಷ ಫೆ.19ರಂದು ಕೆ.ಆರ್.ಪುರದ ಭಟ್ಟರಹಳ್ಳಿಯ ಹೋಟೆಲ್​​​​​​ನಲ್ಲಿ ಹಣ ಕಳವು ಮಾಡಿದ್ದ. ಹೋಟೆಲ್​​​​​​​​ನ ಕ್ಯಾಷ್​​​ಕೌಂಟರ್​​​​ನಲ್ಲಿದ್ದ 1 ಲಕ್ಷ ಹಣ ಕದ್ದಿದ್ದ. ಸತೀಶ್​ ಶೆಟ್ಟಿ ಎಂಬುವರ ಹೋಟೆಲ್​​ನಲ್ಲಿ ಹಣ ಕದ್ದು ಪರಾರಿಯಾಗಿದ್ದ.

Advertisement

ಇದಾದ ಬಳಿಕ ಇತ್ತೀಚೆಗೆ ದೇವನಹಳ್ಳಿ ಬಳಿ ಹೋಟೆಲ್​ನಲ್ಲಿ ಕೆಲಸ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ​​ಹಣ ಕಳೆದುಕೊಂಡಿದ್ದ ಮಾಲೀಕ ಸತೀಶ್ ಶೆಟ್ಟಿಯಿಂದಲೇ ಆರೋಪಿ ಲಾಕ್ ಆಗಿದ್ದಾನೆ. ಸತೀಶ್ ಶೆಟ್ಟಿ ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕ್ಯಾಷ್ ಕೌಂಟರ್​ನಲ್ಲಿ ಕುಳಿತೇ ಹಣವನ್ನು ಪ್ಯಾಂಟ್ ಜೇಬಿಗಿಳಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ.

ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Advertisement
Tags :
LatetsNewsNewsKannadaಆರೋಪಿಕಳ್ಳತನಹೋಟೆಲ್
Advertisement
Next Article