For the best experience, open
https://m.newskannada.com
on your mobile browser.
Advertisement

ಕದ್ದ ಬೈಕ್ ಪಾರ್ಕಿಂಗ್‌ ಮಾಡಿ ಪರಾರಿ : 30 ಬೈಕ್‍ ಪೊಲೀಸರ ವಶಕ್ಕೆ

ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್‌ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪಾರ್ಕ್ ಮಾಡಿ ಐದಾರು ತಿಂಗಳಾದರೂ ಬೈಕ್‍ಗಳನ್ನು ತೆಗೆದುಕೊಂಡು ಹೋಗದೇ ಇದ್ದಾಗ ಅನುಮಾನ ಮೂಡಿ ಅಲ್ಲಿನ ಸಿಬ್ಬಂದಿ ಸುಮಾರು 30 ಬೈಕ್‍ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
09:11 AM Apr 28, 2024 IST | Chaitra Kulal
ಕದ್ದ ಬೈಕ್ ಪಾರ್ಕಿಂಗ್‌ ಮಾಡಿ ಪರಾರಿ   30 ಬೈಕ್‍ ಪೊಲೀಸರ ವಶಕ್ಕೆ

ಬೆಂಗಳೂರು: ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್‌ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪಾರ್ಕ್ ಮಾಡಿ ಐದಾರು ತಿಂಗಳಾದರೂ ಬೈಕ್‍ಗಳನ್ನು ತೆಗೆದುಕೊಂಡು ಹೋಗದೇ ಇದ್ದಾಗ ಅನುಮಾನ ಮೂಡಿ ಅಲ್ಲಿನ ಸಿಬ್ಬಂದಿ ಸುಮಾರು 30 ಬೈಕ್‍ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಮೊದಲು ಬೈಕ್ ಕಳ್ಳತನ ಮಾಡಿ ಕಳ್ಳರು ಬೈಕಿನ ಜೊತೆಯೇ ಪರಾರಿಯಾಗುತ್ತಿದ್ದರು. ಆದರೆ ಈಗ ಸಿಸಿಟಿವಿಗಳು ಎಲ್ಲೆಡೆ ಇರುವ ಕಾರಣ  ಬಂಧನಗೊಳ್ಳುವ ಭಯದಲ್ಲಿ ಪಾರ್ಕಿಂಗ್‌ನಲ್ಲಿ ಕಳ್ಳರು ಬೈಕ್ ಪಾರ್ಕ್ ಮಾಡಿ ಹೋಗುತ್ತಿದ್ದಾರೆ.

ಸುಮಾರು ಆರು ತಿಂಗಳು ಕಳೆದರು ಮರಳಿ ಬರದೇ ಇರುವ ಕಾರಣ ಪಾರ್ಕಿಂಗ್ ಸಿಬ್ಬಂದಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಲ್ಲಿ ಕೆಲವು ಬೈಕ್‍ಗಳನ್ನು ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

Advertisement
Tags :
Advertisement