For the best experience, open
https://m.newskannada.com
on your mobile browser.
Advertisement

ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು: ಬೆಚ್ಚಿಬಿದ್ದ ವೈದ್ಯರು

ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ ತಂಪು ಪಾನೀಯ ಮತ್ತು ಜ್ಯೂಸ್‌ಗಳನ್ನು ಮಾತ್ರ ಸೇವಿಸುತ್ತಿದ್ದ ಮಹಿಳೆ.
08:37 PM May 19, 2024 IST | Nisarga K
ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು  ಬೆಚ್ಚಿಬಿದ್ದ ವೈದ್ಯರು
ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು: ಬೆಚ್ಚಿಬಿದ್ದ ವೈದ್ಯರು

ತೈವಾನ್: ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ ತಂಪು ಪಾನೀಯ ಮತ್ತು ಜ್ಯೂಸ್‌ಗಳನ್ನು ಮಾತ್ರ ಸೇವಿಸುತ್ತಿದ್ದ ಮಹಿಳೆ. ಈ ಕೃತಕ ಸಿಹಿಕಾರಕಗಳನ್ನು ಬಳಸಿ ತಯಾರಿಸಿದ ಪಾನೀಯದ ಅತಿಯಾದ ಸೇವನೆಯಿಂದಲೇ ಮಹಿಳೆ ಅಸ್ವಸ್ಥತೆಗೆ ಒಳಗಾಗಿದ್ದಾಳೆ. ಆಕೆಯ ಸಮಸ್ಯೆಯನ್ನು ಪತ್ತೆ ಹಚ್ಚಲು ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನ್ ನಡೆಸಿದಾಗ ಆಕೆಯ ಬಲ ಕಿಡ್ನಿ ದ್ರವದಿಂದ ಊದಿಕೊಂಡಿದ್ದು ಅದರಲ್ಲಿ ನೂರಾರು ಕಲ್ಲುಗಳು ಇರುವುದು ಪತ್ತೆಯಾಗಿವೆ.

Advertisement

CT ಸ್ಕ್ಯಾನ್ ಪ್ರಕಾರ, ಕಲ್ಲುಗಳು 5 ಎಂಎಂ ಮತ್ತು 2 ಸೆಂ.ಮೀ ಗಾತ್ರಕ್ಕೆ ಬೆಳೆದಿರುವುದು ತಿಳಿದುಬಂದಿದೆ.ನಂತರ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಮೂತ್ರಪಿಂಡದಿಂದ ಸುಮಾರು 300 ಕಲ್ಲುಗಳನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

Advertisement
Advertisement
Tags :
Advertisement