For the best experience, open
https://m.newskannada.com
on your mobile browser.
Advertisement

ದುಬೈ ಮರುಭೂಮಿಯಲ್ಲಿ 'ಮಹಾಮಳೆ'ಗೆ ಕಾರಣವೇನು?

ಅರಬ್ಬರ ನಾಡು ದುಬೈ ನಲ್ಲಿ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ, ಒಮಾನ್‌, ಯೆಮನ್, ಕುವೈತ್, ಜೋರ್ಡನ್‌ನಲ್ಲೂ ಒಂದು ವಾರದಿಂದೀಚಿಗೆ ಇಂಥದ್ದೇ ಮಳೆ ಸುರಿಯುತ್ತಿದೆ.
02:13 PM Apr 18, 2024 IST | Ashitha S
ದುಬೈ ಮರುಭೂಮಿಯಲ್ಲಿ  ಮಹಾಮಳೆ ಗೆ ಕಾರಣವೇನು

ದುಬೈ: ಅರಬ್ಬರ ನಾಡು ದುಬೈ ನಲ್ಲಿ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ, ಒಮಾನ್‌, ಯೆಮನ್, ಕುವೈತ್, ಜೋರ್ಡನ್‌ನಲ್ಲೂ ಒಂದು ವಾರದಿಂದೀಚಿಗೆ ಇಂಥದ್ದೇ ಮಳೆ ಸುರಿಯುತ್ತಿದೆ.

Advertisement

ಈ ಮಹಾಮಳೆಗೆ ಮೋಡ ಬಿತ್ತನೆ ಕಾರ್ಯವೇ ಕಾರಣ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಸುದ್ದಿ ಸಂಸ್ಥೆಗಳೂ ಮೋಡ ಬಿತ್ತನೆಯೇ ಕಾರಣ ಎಂದು ಅಂದಾಜಿಸಿ ವರದಿ ಮಾಡಿವೆ. ಆದರೆ, ಮೋಡ ಬಿತ್ತನೆ ಕುರಿತು ಕೆಲಸ ಮಾಡುತ್ತಿರುವವರು, ವಿಜ್ಞಾನಿಗಳು ಈ ವಾದವನ್ನು ಅಲ್ಲಗಳೆದಿದ್ದಾರೆ.

ಯುಎಇನ ಹವಾಮಾನ ಇಲಾಖೆಯೇ ಹೇಳುವಂತೆ ಮೋಡ ಬಿತ್ತನೆ ಕಾರ್ಯದಿಂದ ಮಳೆ ಬರುತ್ತದೆ ನಿಜ. ಆದರೆ, ಕರಾರುವಕ್ಕಾಗಿ ಇಷ್ಟೇ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂಬುದಕ್ಕೆ ಈವರೆಗೂ ಉತ್ತರ ದೊರೆತಿಲ್ಲ. ಮೋಡ ಬಿತ್ತನೆಯಿಂದ ಮಳೆ ಪ್ರಮಾಣದಲ್ಲಿ ಶೇ 10ರಿಂದ ಶೇ 30ರಷ್ಟಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

Advertisement

ವಿಜ್ಞಾನಿಗಳ ಪ್ರಕಾರ ಅರಬ್ ರಾಷ್ಟ್ರಗಳಲ್ಲಿನ ಮಹಾಮಳೆಗೆ 3 ಕಾರಣಗಳನ್ನು ವಿವರಿಸಲಾಗಿದೆ. ಏಷ್ಯಾದತ್ತ ಬೀಸುವ ಹವಾ ಮಾರುತಗಳು (ಜೆಟ್‌ ಸ್ಟ್ರೀಂ), ಶೀತಮಾರುತಗಳು ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಕಾರಣಗಳಿಂದಾಗಿ ಮಹಾಮಳೆಯಾಗುತ್ತದೆ ಎನ್ನಲಾಗಿದೆ.

ಇನ್ನು ಮಳೆಯನ್ನೇ ಕಾಣದ ಅರಬ್ ರಾಷ್ಟ್ರಗಳು ತಮ್ಮ ಒಳಚರಂಡಿ ವ್ಯವಸ್ಥೆಯನ್ನು ಮಹಾಮಳೆಗೆ ಹೊಂದಿಕೊಂಡಂತೆ ವಿನ್ಯಾಸಗೊಳಿಸಿಕೊಂಡಿಲ್ಲ. ಮಹಾಮಳೆ ಸುರಿದಾಗ ಒಳಚರಂಡಿ ತುಂಬಿ ನೀರು ಮೇಲೆ ಹರಿಯಲಾರಂಭಿಸಿದೆ. ಇದೂ ಕೂಡ ದುಬೈ ಪ್ರವಾಹಕ್ಕೆ ಕಾರಣ ಎಂದು ಹೇಳಲಾಗಿದೆ.

ಸ್ವಲ್ಪ ಪ್ರಮಾಣದ ತೇವಾಂಶದಿಂದ ಕೂಡಿರುವ ಈ ಹವಾ ಮಾರುತಗಳು ಹೊರ್ಮುಜ್‌ ಕೊಲ್ಲಿ ದಾಟುವಾಗ, ಇನ್ನಷ್ಟು ಆವಿಯನ್ನು ಕ್ರೋಡೀಕರಿಸಿಕೊಳ್ಳುತ್ತವೆ. ಅರೇಬಿಯಾ ಉಪಖಂಡವನ್ನು ಮುಟ್ಟುವಾಗ ಅಲ್ಪ ಪ್ರಮಾಣದ ಮಳೆ ತರುತ್ತವೆ. ಆದರೆ ಅರೇಬಿಯಾ ಉ‍ಪಖಂಡದ ಮೇಲೆ ಉಷ್ಣಾಂಶ ಹೆಚ್ಚಾಗಿದ್ದರೆ ಈ ಆವಿಯ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಅತಿಉಷ್ಣಾಂಶದ ಕಾರಣದಿಂದ ಅದೇ ಸಂದರ್ಭದಲ್ಲಿ ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿ (ಯೆಮನ್‌ ಮತ್ತು ಒಮಾನ್‌ ಕರಾವಳಿ ಬಳಿ) ವಾಯುಭಾರ ಕುಸಿದಿರುತ್ತದೆ. ಇದು ಸಹ ವಾತಾವರಣದಲ್ಲಿ ನೀರಾವಿಯ ಪ್ರಮಾಣವನ್ನು ಉಂಟು ಮಾಡುತ್ತದೆ. ಜತೆಗೆ ದಟ್ಟ ಮೋಡಗಳನ್ನು ಸೃಷ್ಟಿಸುತ್ತದೆ. ಹೀಗಾಗಿ ಒಂದಿಡೀ ವರ್ಷದಲ್ಲಿ ಸುರಿಯಬೇಕಾದಷ್ಟು ಮಳೆ ಕೆಲವೇ ಗಂಟೆಗಳಲ್ಲಿ ಸುರಿದು ಬಿಡುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

Advertisement
Tags :
Advertisement