For the best experience, open
https://m.newskannada.com
on your mobile browser.
Advertisement

ಐಐಟಿ ಕಾನ್ಪುರ ದ ಪಿಎಚ್​ಡಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಐಐಟಿ ಕಾನ್ಪುರ ದ ಪಿಎಚ್​ಡಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ-ಕಾನ್ಪುರ)ದಲ್ಲಿ ವರದಿಯಾಗಿದೆ.
04:16 PM Jan 18, 2024 IST | Ashika S
ಐಐಟಿ ಕಾನ್ಪುರ ದ ಪಿಎಚ್​ಡಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಕಾನ್ಪುರ: ಐಐಟಿ ಕಾನ್ಪುರ ದ ಪಿಎಚ್​ಡಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ-ಕಾನ್ಪುರ)ದಲ್ಲಿ ವರದಿಯಾಗಿದೆ.

Advertisement

ಪಿಎಚ್‌ಡಿ ವಿದ್ಯಾರ್ಥಿನಿ ಗುರುವಾರ ಬೆಳಗ್ಗೆ ತನ್ನ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಪೊಲೀಸರ ಪ್ರಕಾರ, ಸಂಶೋಧನಾ ವಿದ್ಯಾರ್ಥಿ ಪ್ರಿಯಾಂಕಾ ಜಾರ್ಖಂಡ್‌ನ ದುಮ್ಕಾ ಮೂಲದವರು.

Advertisement

ಹಾಸ್ಟೆಲ್ ಮ್ಯಾನೇಜರ್ ರಿತು ಪಾಂಡೆ,  ಹಾಸ್ಟೆಲ್ ರೂಮ್ ತಲುಪಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂತು. ಬಹಳ ಹೊತ್ತಾದರೂ ಪ್ರಿಯಾಂಕಾ ಬಾಗಿಲು ತೆರೆಯದೇ ಇದ್ದಾಗ ಪಾಂಡೆ ಬಲವಂತವಾಗಿ ಆಕೆಯ ಕೋಣೆಗೆ ನುಗ್ಗಿದ್ದರು. ಸೀಲಿಂಗ್ ಫ್ಯಾನ್‌ಗೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡಿರುವುದನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಫೋರೆನ್ಸಿಕ್ಸ್ ತಂಡದೊಂದಿಗೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಒಂದು ತಿಂಗಳಲ್ಲಿ ಸಂಸ್ಥೆಯಲ್ಲಿ ನಡೆದ ಇಂತಹ ಮೂರನೇ ಘಟನೆ ಇದಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821

Advertisement
Tags :
Advertisement