For the best experience, open
https://m.newskannada.com
on your mobile browser.
Advertisement

ಅಮೆರಿಕದಲ್ಲಿ ಸುತ್ತಿಗೆಯಿಂದ ಹೊಡೆದು ಭಾರತೀಯ ವಿದ್ಯಾರ್ಥಿಯ ಕೊಲೆ

ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಅಮೆರಿಕಾದ ಜಾರ್ಜಿಯಾದಲ್ಲಿ ಸಂಭವಿಸಿದೆ.
10:06 AM Jan 30, 2024 IST | Gayathri SG
ಅಮೆರಿಕದಲ್ಲಿ ಸುತ್ತಿಗೆಯಿಂದ ಹೊಡೆದು ಭಾರತೀಯ ವಿದ್ಯಾರ್ಥಿಯ ಕೊಲೆ

ಅಮೆರಿಕ: ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಅಮೆರಿಕಾದ ಜಾರ್ಜಿಯಾದಲ್ಲಿ ಸಂಭವಿಸಿದೆ.

Advertisement

ಮೃತ ವಿದ್ಯಾರ್ಥಿಯನ್ನು ವಿವೇಕ್ ಸೈನಿ(25) ಎಂದು ಗುರುತಿಸಲಾಗಿದೆ. ಆತ ಹರ್ಯಾಣದ ಪಂಚಕುಲ ನಿವಾಸಿ. ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದ್ದು, ಈತ ಜಾರ್ಜಿಯಾದ ಲಿಥೋನಿಯಾ ನಿವಾಸಿಯಾಗಿದು, ಮಾದಕ ವ್ಯಸನಿ ಆಗಿದ್ದ. ಮೃತ ವಿದ್ಯಾರ್ಥಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯು ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿ ಬಳಿ ಉಚಿತವಾಗಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಸ್ನೇಹಿತ ಮಾಹಿತಿ ನೀಡಿದ್ದಾರೆ. ಮೃತ ಯುವಕ ಜನವರಿ 14ರಂದು ಆರೋಪಿಗೆ ಉಚಿತವಾಗಿ ವಸ್ತುಗಳನ್ನು ನೀಡಲು ನಿರಾಕರಿಸಿದ್ದಾನೆ, ಈ ಕಾರಣಕ್ಕೆ ಕೊಲೆ ನಡೆದಿದೆ.

Advertisement

ಮಾಹಿತಿ ಪ್ರಕಾರ ಸೈನಿ ಎಂಬಿಎ ಓದಲು ಅಮೆರಿಕಕ್ಕೆ ತೆರಳಿದ್ದ ಎನ್ನಲಾಗಿದೆ. ಮೃತದೇಹವನ್ನು ಭಾರತಕ್ಕೆ ತರುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಭಾರತೀಯ ಧೂತಾವಾಸ ಕಚೇರಿ ಮಾಹಿತಿ ನೀಡಿದೆ.

Advertisement
Tags :
Advertisement