ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್; ಸಚಿವ ಕೃಷ್ಣ ಭೈರೇಗೌಡ

ರಜಾದಿನ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ  ಕೃಷ್ಣ ಭೈರೇಗೌಡ ಹೇಳಿದ್ದಾರೆ.
10:40 AM Mar 13, 2024 IST | Ashitha S

ಬೆಂಗಳೂರು: ರಜಾದಿನ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ  ಕೃಷ್ಣ ಭೈರೇಗೌಡ ಹೇಳಿದ್ದಾರೆ.

Advertisement

ಪ್ರತಿ ಜಿಲ್ಲೆಯಲ್ಲೂ ಭಾನುವಾರ ಒಂದೊಂದು ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಮಾಡಲಾಗುವುದು. ಸದ್ಯ   ಕಾರ್ಪೋರೇಷನ್ ಇರುವ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್‌ ಇದೆ. ಏಪ್ರಿಲ್ ನಂತರ ಮಹಾನಗರಗಳ ವ್ಯಾಪ್ತಿಯಲ್ಲೂ ಯೋಜನೆ ಜಾರಿ ಮಾಡುತ್ತೇವೆ. ಭಾನುವಾರ ಕೆಲಸ ಮಾಡಿದವರಿಗೆ ಮಂಗಳವಾರ ರಜೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಇನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಇತರರ ಆಸ್ತಿಯನ್ನು ಕಬಳಿಕೆ ಮಾಡುವ ಪ್ರಕರಣಗಳನ್ನು ತಡೆಯಲು ಆಸ್ತಿಗಳ ನೋಂದಣಿಗೆ ಆಧಾರ್  ದೃಢೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನನ್ನ ಆಸ್ತಿ ಎಂಬ ಯೋಜನೆಯನ್ನ ನನ್ನ ಭೂಮಿ, ನನ್ನ ಗುರುತು ಎಂಬ ಶೀರ್ಷಿಕೆಯಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ನೋಂದಣಿ ವೇಳೆ ಆಧಾರ್ ಪಡೆಯುವ ಸೇವೆ ಆರಂಭ ಮಾಡುತ್ತೇವೆ ಎಂದರು. ಕಡ್ಡಾಯ ಮಾಡುವುದಕ್ಕೆ ಆಗುವುದಿಲ್ಲ, ಆದರೆ ನೋಂದಣಿ ಮಾಡಬೇಕಾಗುತ್ತದೆ. ನೋಂದಣಿ ಸಮಯದಲ್ಲೂ ಆಧಾರ್ ನಂಬರ್ ಕೇಳುತ್ತೇವೆ. ಆಧಾರ್ ಜೋಡಣೆ ಮಾಡುವುದರಿಂದ ನಕಲು ತಡೆಯಬಹುದು. ಸುಪ್ರೀಂ ಕೋರ್ಟ್ ಪ್ರಕಾರ ಕಡ್ಡಾಯ ಮಾಡಲು‌ ಆಗುವುದಿಲ್ಲ. ಜಾಗರೂಕತೆಯಿಂದ ರಿಜಿಸ್ಟರ್ ಮಾಡಲು ಅನುಕೂಲ‌ ಆಗಲಿದೆ ಎಂದು ಹೇಳಿದ್ದಾರೆ.

Advertisement

Advertisement
Tags :
GOVERNMENTindiaKARNATAKALatestNewsNewsKannadaಕೃಷ್ಣ ಭೈರೇಗೌಡನವದೆಹಲಿಬೆಂಗಳೂರು
Advertisement
Next Article