For the best experience, open
https://m.newskannada.com
on your mobile browser.
Advertisement

ಹೈಕೋರ್ಟ್‌ನ ನ್ಯಾಯಪೀಠದ ಮುಂದೇಯೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಹೈಕೊರ್ಟ್‌ ನ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್‌ ಸಂಖ್ಯೆ 1ರಲ್ಲಿ ಬುಧವಾರ ಮಧ್ಯಾಹ್ನ ವ್ಯಕ್ತಿಯೋರ್ವ ಬ್ಲೇಡ್‌ನಿಂದ ತಮ್ಮ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
03:21 PM Apr 03, 2024 IST | Nisarga K
ಹೈಕೋರ್ಟ್‌ನ ನ್ಯಾಯಪೀಠದ ಮುಂದೇಯೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಹೈಕೋರ್ಟ್‌ನ ನ್ಯಾಯಪೀಠದ ಮುಂದೇಯೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಬೆಂಗಳೂರು: ಹೈಕೊರ್ಟ್‌ ನ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್‌ ಸಂಖ್ಯೆ 1ರಲ್ಲಿ ಬುಧವಾರ ಮಧ್ಯಾಹ್ನ ವ್ಯಕ್ತಿಯೋರ್ವ ಬ್ಲೇಡ್‌ನಿಂದ ತಮ್ಮ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Advertisement

ಮಧ್ಯಾಹ್ನ 1.15ರ ಸಮಯದಲ್ಲಿ ಕ್ರಮ ಸಂಖ್ಯೆ 26ರ ಪ್ರಕರಣವನ್ನು ಆಫೀಸರ್‌ ಕೂಗುತ್ತಿದ್ದಂತೆ ಮಧ್ಯ ವಯಸ್ಸಿನ ವ್ಯಕ್ತಿ ನ್ಯಾಯಪೀಠದ ಮುಂದೆ ಬಂದು ನಿಂತರು. ನೋಡ ನೋಡುತ್ತಿದ್ದಂತೆಯೇ ಆ ವ್ಯಕ್ತಿ ತಾವು ತಂದಿದ್ದ ಹರಿತವಾದ ಬ್ಲೇಡ್‌ನಂತಹ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಮಡರು.

ತಕ್ಷಣವೇ ಪೊಲೀಸರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಧಾವಿಸಿದರು. ಇನ್ನು ನಂತರ ಎನಾಯಿತು ಎಂಬುದರ ಮಾಹಿತಿ ಲಭ್ಯವಾಗಿಲ್ಲ.

Advertisement

ಭದ್ರತ ಲೋಪದಿಂದಾಗಿ ʻಹೈಕೋರ್ಟ್‌ ಒಳ ಪ್ರವೇಶಕ್ಕೆ ಭಾರಿ ಬಿಗಿ ಭದ್ರತ ಇದ್ದರೂ ಈ ವ್ಯಕ್ತಿ ಆಯುಧದೊಂದಿಗೆ ಹೇಗೆ ಪ್ರವೇಶಿಸಿದ ಆಗ ಪೊಲೀಸರು ಏನು ಮಾಡುತ್ತಿರುತ್ತಾರೆʼ ಎಂದು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

Advertisement
Tags :
Advertisement