For the best experience, open
https://m.newskannada.com
on your mobile browser.
Advertisement

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರಿಂದ ಬಿಗ್ ಶಾಕ್

ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು 60 ಕಡೆಗಳಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಕೊಡಗು ಬೆಂಗಳೂರು, ಬೆಳಗಾವಿ, ಕೋಲಾರ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ.
11:18 AM Mar 27, 2024 IST | Nisarga K
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರಿಂದ ಬಿಗ್ ಶಾಕ್
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರಿಂದ ಬಿಗ್ ಶಾಕ್

ಕರ್ನಾಟಕ: ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು 60 ಕಡೆಗಳಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಕೊಡಗು ಬೆಂಗಳೂರು, ಬೆಳಗಾವಿ, ಕೋಲಾರ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ.

Advertisement

ಕೊಡಗು: ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿಯಾಗಿದೆ. ಸೋಮವಾರಪೇಟೆ ಇಓ ಜಯಣ್ಣ ಹಾಗೂ ಅಸಿಟೆಂಟ್ ಇಂಜಿನಿಯರ್ ಫಯಾಜ್ ಅಹಮದ್ ಮನೆ ಮೇಲೂ ಲೋಕಾಯುಕ್ತ ದಾಳಿಯಾಗಿದೆ. ಕುಶಾಲನಗರದ ಶಿವರಾಮ ಕಾರಂತ್ ಬಡವಣೆಯಲ್ಲಿನ ಮನೆ ಹಾಗೂ ದ.ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಜಯಣ್ಣ ಕಚೇರಿ ಮೇಲೂ ದಾಳಿಯಾಗಿದೆ.

ಧಾರವಾಡ: ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಹಿರೇಮಠ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ.

Advertisement

ಮೈಸೂರು: ಮೈಸೂರು ಲೊಕಾಯುಕ್ತ ಎಸ್.ಪಿ. ಸಜಿದ್ ಕುಮಾರ್ ನೇತೃತ್ವದಲ್ಲಿ 12 ಕಡೆ ದಾಳಿಯಾಗಿದೆ. ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಿಡಿಒ ಯತೀಶ್ ನಿವಾಸದ ಮೇಲೆ ದಾಳಿಯಾಗಿದೆ. ಪಿಡಿಒ ಯತೀಶ್ ಅವರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ. ಮೈಸೂರು, ಚನ್ನಪಟ್ಟಣದಲ್ಲಿ ಮನೆಗಳನ್ನ ಹೊಂದಿರು ಆರೋಪ ಇದೆ. ಬೆಸ್ಕಾಂ ಇಂಜಿನಿಯರ್ ಒಬ್ಬರ ನಿವಾಸದ ಮೇಲೂ ದಾಳಿಯಾಗಿದೆ ಎನ್ನಲಾಗಿದೆ.

ಬೀದರ್: ಏಕಕಾಲಕ್ಕೆ ನಾಲ್ಕು ಕಡೆ ದಾಳಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಕಾರಂಜಾ ಇಲಾಖೆಯ ಅಧಿಕಾರಿಯ ನಿವಾಸಗಳು, ಕಚೇರಿ ಮೇಲೆ ದಾಳಿಯಾಗಿದೆ. ಕಾರಂಜಾ ಅಧಿಕಾರಿ ಶಿವಕುಮಾರ್ ಸ್ವಾಮಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿಯಾಗಿದೆ. ಲೋಕಾಯುಕ್ತ ಎಸ್‌ಪಿ ಆಂಟ್ಯೋನಿ ಜಾನ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಎನ್‌ಎಮ್.ಓಲೇಕಾರ್ ನೇತೃತ್ವದಲ್ಲಿ ದಾಳಿಯಾಗಿದೆ.

Advertisement
Tags :
Advertisement